ಮಂಗಳವಾರ, 29 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಕೃಷಿ ಮೇಳಕ್ಕೆ ಮೆರುಗು ತಂದ ಬೌ ಬೌ ಸದ್ದು

ಮೇಳದ ಮೂರನೇ ದಿನ; ಗಮನ ಸೆಳೆದ ಶ್ವಾನ ಪ್ರದರ್ಶನ
Published : 21 ಅಕ್ಟೋಬರ್ 2024, 7:23 IST
Last Updated : 21 ಅಕ್ಟೋಬರ್ 2024, 7:23 IST
ಫಾಲೋ ಮಾಡಿ
Comments
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ನಾಯಿಗಳು
‘ಬಾಸ್‌’ಗೆ ಮೊದಲ ಬಹುಮಾನದ ಗರಿ!
ಶ್ವಾನ ಮೇಳದಲ್ಲಿ ಮೊದಲ ಬಹುಮಾನ ಶಿವಮೊಗ್ಗದ ಸೂರಜ್ ಅಭಿಷೇಕ್ ಅವರ ‘ಬಾಸ್’ ಹೆಸರಿನ ಜರ್ಮನ್ ಶಫರ್ಡ್ ನಾಯಿಗೆ ಸಂದಿತು. ಸೂರಜ್‌ ₹8000 ನಗದು ಬಹುಮಾನ ಜೇಬಿಗಿಳಿಸಿಕೊಂಡರು. ಎರಡನೇ ಬಹುಮಾನ ಶಿವಮೊಗ್ಗದ ಬಿ.ಸುಜಯ್ ಅವರ ಡಾಬರ್‌ಮನ್‌ ತಳಿಯ ನಾಯಿಗೆ ದೊರೆಯಿತು. ₹5000 ನಗದು ನೀಡಿ ಗೌರವಿಸಲಾಯಿತು. ಮೂರನೇ ಬಹುಮಾನ ಶಿವಮೊಗ್ಗದ ಕೆನಿತ್ ಅವರ ಕ್ಯಾರವಾನ್ ಹೌಂಡ್ ಪಡೆಯಿತು. ₹3000 ನಗದು ಬಹುಮಾನ ಕೊಡಲಾಯಿತು. ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ನಾಯಿಗಳಿಗೂ ಪ್ರಮಾಣಪತ್ರ ಕೊಡಲಾಯಿತು. ತೀರ್ಪುಗಾರರಾಗಿ ಶಿವಮೊಗ್ಗ ಪಾಲಿಕ್ಲಿನಿಕ್ ಉಪನಿರ್ದೇಶಕ ಬಸವೇಶ ಹೂಗಾರ ಪಶು ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಸಾಗರದ ಎನ್‌.ಎಚ್‌. ಶ್ರೀಪಾದರಾವ್ ಶಿಕಾರಿಪುರದ ಮುಖ್ಯ ಪಶುವೈದ್ಯಕೀಯ ಅಧಿಕಾರಿ ಡಾ.ಕೆ.ಎಂ.ಸುನಿಲ್‌ ಕಾರ್ಯನಿರ್ವಹಿಸಿದರು.
ಗಮನ ಸೆಳೆದ ಇಂಗ್ಲೆಂಡ್ ಮೂಲದ ಮೈಲೋ
ಶ್ವಾನಪ್ರದರ್ಶನದಲ್ಲಿ ಇಂಗ್ಲೆಂಡ್‌ನಿಂದ ತರಿಸಿದ್ದ ಜಾಕ್ ರಸೆಲ್ ಟೆರಿಯರ್ ತಳಿಯ ಪುಟ್ಟ ನಾಯಿ ‘ಮೈಲೋ’ ಎಲ್ಲರ ಗಮನ ಸೆಳೆಯಿತು. ಮೈಲೋ ದಾವಣಗೆರೆಯಲ್ಲಿ ನೆಲೆಸಿರುವ ರೈಲ್ವೆ ಎಂಜಿನಿಯರ್ ತೇಜಸ್ವಿ ಇಂದ್ರಾನಾಯ್ಕ ಹಾಗೂ ಸುಭಾಷಿಣಿ ದಂಪತಿ ಕುಟುಂಬದ ಮುದ್ದಿನ ಸದಸ್ಯ. ಶಿವಮೊಗ್ಗದ ಬ್ರೀಡರ್ ರಾಜೇಶ್ ಎಂಬುವವರ ಮೂಲಕ  ಮೈಲೋನನ್ನು ಇಂಗ್ಲೆಂಡ್‌ನಿಂದ ಖರೀದಿಸಿ ತರಿಸಿರುವುದಾಗಿ ಸುಭಾಷಿಣಿ ಹೇಳಿದರು. ‘ಮೈಲೋ ನಮ್ಮ ಮನೆಗೆ ಬಂದಾಗ 35 ದಿನದ ಮರಿ. ಈಗ ಅವನಿಗೆ 4.5 ವರ್ಷ. ಜೊತೆಗೆ ಐದು ಮಕ್ಕಳ ತಂದೆ. ಮೈಲೋನನ್ನು ನಾಯಿ ಎಂಬಂತೆ ಕಂಡಿಲ್ಲ. ಮನೆಯ ಸದಸ್ಯನಂತೆ ಬೆಳೆಸಿದ್ದೇವೆ. ಇಡೀ ಕರ್ನಾಟಕ ಸುತ್ತಿಸಿದ್ದೇವೆ. ಎಲ್ಲಿಗೇ ಕರೆದೊಯ್ದರೂ ಹವಾನಿಯಂತ್ರಿತ ವಾಹನದಲ್ಲಿ ಕರೆದೊಯ್ಯುತ್ತೇವೆ’ ಎಂದು ಸುಭಾಷಿಣಿ ಶ್ವಾನಪ್ರೀತಿಯ ಬಗ್ಗೆ ಹೇಳಿದರು.
ಗಮನ ಸೆಳೆದ ಸುಝಿ ಟೆಡ್ಡಿ ಕ್ರೇಜಿ!
ಚಿನ್ನಿಕಟ್ಟೆಯ ಕಾರ್ತಿಕ್‌ ಮುಧೋಳ ತಳಿಯ ನಾಯಿ ಸುಝಿ ಗಮನ ಸೆಳೆಯಿತು. ತುಮಕೂರಿನ ನವೀನ್‌ ಅವರು ಕರೆತಂದಿದ್ದ ಚೀನಾ ಮೂಲದ ಸಿಟ್ಜೋ ತಳಿಯ ಟೆಡ್ಡಿ ಹೆಸರಿನ ನಾಯಿ ಶಿವಮೊಗ್ಗದ ದರ್ಶನ್‌ ತಂದಿದ್ದ ಕ್ರೇಜಿ ಹೆಸರಿನ ಜರ್ಮನ್ ಶಫರ್ಡ್ ಶಿವಮೊಗ್ಗದ ರೋಲೆಕ್ಸ್ ಹೆಸರಿನ ಡಾಬರ್‌ಮನ್ ತಳಿಯ ನಾಯಿ ಗಮನ ಸೆಳೆದವು. ಬೆಲ್ಜಿಯನ್ ಮೆಲಿನೊವ ತಳಿ ವಿಭಾಗದಲ್ಲಿ ಹೊಸನಗರ ತಾಲ್ಲೂಕಿನ ನಗರದಿಂದ ಬಂದಿದ್ದ ರವೀಂದ್ರ ಅವರ ಕರ್ಣ ಹಾಗೂ ಭದ್ರಾವತಿ ತಾಲ್ಲೂಕಿನ ಅರೆಬಿಳಚಿಯ ಮಂಜುನಾಥ್ ಅವರ ಲಕ್ಕಿ ಹೆಸರಿನ ನಾಯಿಗಳು ತಮ್ಮ ವಿಭಾಗದಲ್ಲಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದು ಶ್ವಾನಪ್ರಿಯರ ಗಮನ ಸೆಳೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT