ಸಾಗರ: ಇತರ ಧರ್ಮ, ಜಾತಿ, ಸಮುದಾಯ, ಸಂಸ್ಕೃತಿಗಳನ್ನು ಗೌರವಿಸುವ ಸಹಿಷ್ಣುತೆಯ ಮನೋಧರ್ಮ ಕಲಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು ಎಂದು ಗೋವಾದ ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ ನಾರ್ಮಾ ಆಳ್ವಾರಸ್ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ ‘ಶಿಕ್ಷಣದಲ್ಲಿ ಪರ್ಯಾಯ ಮಾರ್ಗಗಳ ಶೋಧನೆ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

‘ನನ್ನ ಧರ್ಮ, ಸಮುದಾಯದ ವಿವೇಕ ಮತ್ತು ಕ್ರಿಯೆಗಳು ಮಾತ್ರ ಸತ್ಯ ಎಂದು ಭಾವಿಸುವ ವ್ಯಕ್ತಿಯನ್ನು ಯಾವ ದೃಷ್ಟಿಕೋನದಿಂದಲೂ ‘ವಿದ್ಯಾವಂತ’ ಎಂದು ಪರಿಗಣಿಸಲಾಗದು. ಸಹಿಷ್ಣುತೆಯ ಜೊತೆಗೆ ಎಲ್ಲರೊಂದಿಗೂ ಸಹಬಾಳ್ವೆ ನಡೆಸುವ ಉನ್ನತ ನೈತಿಕ ಮೌಲ್ಯಗಳನ್ನು ಕಲಿಸುವ ಶಿಕ್ಷಣದ ಮಾದರಿಯನ್ನು ನಾವು ಶೋಧಿಸಬೇಕಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಮಕ್ಕಳು, ಯುವಜನರು ತಾವು ವಾಸಿಸುತ್ತಿರುವ ಪರಿಸರದೊಂದಿಗೆ ಅವಿನಾಭಾವ ಸಂಬಂಧ ಇಟ್ಟುಕೊಂಡೆ ಶಿಕ್ಷಣ ಪಡೆಯುವಂತಾಗಬೇಕು. ವಿದ್ಯಾರ್ಥಿಗಳಲ್ಲಿ ವಿಭಿನ್ನ ಆಸಕ್ತಿ, ಕುತೂಹಲಗಳನ್ನು ಬೆಳೆಸುವ ಮಾದರಿಯ ಶಿಕ್ಷಣ ಕ್ರಮ ನಮ್ಮದಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಕೆಲವೊಮ್ಮೆ ನಮ್ಮ ಮಕ್ಕಳು ಆಯ್ಕೆ ಮಾಡಿಕೊಳ್ಳುವ ಮಾರ್ಗ ಪೋಷಕರಾದ ನಮಗೆ ಹಿಡಿಸದೆ ಇರಬಹುದು. ಆದರೆ ಅವರ ಆಸಕ್ತಿಯ ಮಾರ್ಗದಲ್ಲಿ ಯಶಸ್ಸು ಕಾಣುತ್ತಾರೆ ಎಂಬ ನಂಬಿಕೆಯನ್ನಿಟ್ಟು ಅವರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಬೇಕು’ ಎಂದು ಅವರು ಹೇಳಿದರು.

ಮಕ್ಕಳು ಹಾಗೂ ಯುವಜನರು ಹೆಚ್ಚು ಸಮಯವನ್ನು ಟಿವಿಯ ಮುಂದೆ ಕಳೆಯುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಟಿವಿಯ ವೀಕ್ಷಣೆ ಮಕ್ಕಳ ಸೃಜನಶೀಲತೆಯನ್ನು ಕೊಲ್ಲುತ್ತದೆ. ಯಾರು ಟಿವಿಯ ಮುಂದೆ ಹೆಚ್ಚು ಕಾಲ ಕೂರುತ್ತಾರೋ ಅವರು ಟಿವಿಯಲ್ಲಿ ಬರುವ ಸಾಧ್ಯತೆಯೆ ಇಲ್ಲ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದರು.

ಪೋಷಕರಾದವರು ಮಕ್ಕಳಿಗೆ ಸಾಧ್ಯವಾದಷ್ಟು ತಮ್ಮ ಸಮಯವನ್ನು ಮೀಸಲಿಡಬೇಕು. ಮಕ್ಕಳೊಂದಿಗೆ ಕಳೆಯಲು ನಮಗೆ ಸಮಯವಿಲ್ಲ ಎಂದು ಹೇಳುವುದು ಪೋಷಕರ ದೊಡ್ಡ ದೋಷವಾಗಿದೆ. ವಿವಿಧ ಪ್ರದೇಶಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ, ವಿವಿಧ ಸಮುದಾಯ, ಸ್ತರದ ಜನರೊಂದಿಗೆ ಬೆರೆಯುವ ಅವಕಾಶವನ್ನು ಮಕ್ಕಳಿಗೆ, ಯುವಜನರಿಗೆ ಕಲ್ಪಿಸಬೇಕು. ಇದು ಕೂಡ ಶಿಕ್ಷಣದ ಒಂದು ಅಂಶ ಎಂದು ಹೇಳಿದರು.

ಗೋವಾದ ಪರಿಸರ ಹೋರಾಟಗಾರ ಕ್ಲಾಡ್ ಆಳ್ವಾರಸ್ ಮಾತನಾಡಿ, ಯುರೋಪ್ನ ಪ್ರಭಾವಳಿಯಲ್ಲಿ ಸಿಲುಕಿರುವ ಇಂದಿನ ಸಾಂಪ್ರದಾಯಿಕ ಶಿಕ್ಷಣದ ಸಿದ್ದ ಮಾದರಿಯಲ್ಲಿನ ಕಲಿಕೆಯ ಕ್ರಮದ ಏಕತಾನತೆಗಳನ್ನು ಮುರಿದು ಹೊಸ ಮಾದರಿಗಳನ್ನು ಕಟ್ಟಬೇಕಿದೆ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಜೊತೆಗೆ ಇರುವ ಸಮುದಾಯ, ಸಂಸ್ಕೃತಿಗಳ ಒಡನಾಟವಿಲ್ಲದ ಶಿಕ್ಷಣ ಸಾರ್ಥಕತೆ ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಜೀವಂತ ಪಠ್ಯಗಳ ಅಧ್ಯಯನ ಶಿಕ್ಷಣದ ಭಾಗವಾಗಬೇಕು. ಆದರೆ ಪ್ರಸ್ತುತ ಬಹುತೇಕ ನಿರ್ಜೀವ ಪಠ್ಯಗಳೆ ನಮ್ಮ ಶಿಕ್ಷಣ ವ್ಯವಸ್ಥೆಯ ಭಾಗವಾಗಿದೆ’ ಎಂದರು.

‘ನಮ್ಮ ಇಂದಿನ ವಿಶ್ವವಿದ್ಯಾನಿಲಯಗಳ ಶಿಕ್ಷಣದ ಗುಣಮಟ್ಟ ಯಾವ ಮಟ್ಟಿಗೆ ಕುಸಿತ ಕಂಡಿದೆ ಎಂದರೆ ಸ್ನಾತಕೋತ್ತರ ಪದವಿ ಗಳಿಸಿದ ವಿದ್ಯಾರ್ಥಿಗೆ ಯಾರ ಹೇಳಿಕೆಯನ್ನೂ ಉಲ್ಲೇಖಿಸದೆ ಒಂದು ಪುಟದ ಸ್ವತಂತ್ರ ಲೇಖನ ಬರೆಯುವ ಸಾಮರ್ಥ್ಯ ಇಲ್ಲವಾಗಿದೆ. ಇದು ಇಂದಿನ ಶಿಕ್ಷಣ ವ್ಯವಸ್ಥೆಯ ದುರಂತವಾಗಿದೆ’ ಎಂದು ವ್ಯಾಖ್ಯಾನಿಸಿದರು.

ಸಂವಾದ ನಡೆಯಿತು. ಜಸ್ವಂತ್ ಜಾಧವ್ ಗೋಷ್ಠಿಯನ್ನು ನಿರ್ವಹಿಸಿದರು. ಇದಕ್ಕೂ ಮುನ್ನ ನಡೆದ ಗೋಷ್ಠಿಯಲ್ಲಿ ಶನಿವಾರ ಪ್ರದರ್ಶನಗೊಂಡ ‘ಸೇತುಬಂಧ’ ನಾಟಕದ ಕುರಿತು ಚರ್ಚೆ ನಡೆಯಿತು. ಸಂಜೆ ಶಿವರಾಮ ಕಾರಂತ ರಂಗಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಆಶ್ಚರ್ಯ ಚೂಡಾಮಣಿ’ (ವಿನ್ಯಾಸ : ಮಂಜು ಕೊಡಗು, ನಿರ್ದೇಶನ: ಜೋಸೆಫ್ ಜಾನ್) ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.