ಶಿವಮೊಗ್ಗ: ಬೀದರ್ನಲ್ಲಿ ಈಚೆಗೆ ಆಯೋಜಿಸಿದ್ದ 18ನೇ ಅಂತರ್ ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಶಿವಮೊಗ್ಗದ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗುಂಪು ಆಟಗಳ ಸ್ಪರ್ಧೆಯಲ್ಲಿ ಚಾಂಪಿಯನ್ ಶ್ರೇಯ ತಮ್ಮದಾಗಿಸಿಕೊಂಡರು.

ಪುರುಷ ವಿಭಾಗದಲ್ಲಿ ಕೊಕ್ಕೊ, ಬ್ಯಾಸ್ಕೆಟ್ಬಾಲ್, ಫುಟ್ಬಾಲ್, ಹಾಗೂ ವಾಲಿಬಾಲ್ನಲ್ಲಿ ಪ್ರಥಮ ಸ್ಥಾನ, ಮಹಿಳೆಯರ ವಿಭಾಗದ ವಾಲಿಬಾಲ್ನಲ್ಲಿ ಪ್ರಥಮ ಸ್ಥಾನ ಪಡೆದರು.

ಅಥ್ಲೆಟಿಕ್ಸ್ ಪುರುಷರ ವಿಭಾಗದಲ್ಲಿ 40 ಅಂಕ ಹಾಗೂ ಮಹಿಳೆಯರ ಅಥ್ಲೆಟಿಕ್ಸ್ ವಿಭಾಗದಲ್ಲಿ 20 ಅಂಕ ಪಡೆದು ಒಟ್ಟು 60 ಅಂಕಗಳೊಂದಿಗೆ ಕ್ರೀಡಾಕೂಟದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರು.

ಪುರುಷರ ವಿಭಾಗ:

ಅಥ್ಲೆಟಿಕ್ಸ್ನಲ್ಲಿ ಟಿ.ವಿ. ಪುನೀತ್ ಹೈಜಂಪ್ನಲ್ಲಿ ಪ್ರಥಮ, ಟ್ರಿಪಲ್ ಜಂಪ್ನಲ್ಲಿ ದ್ವಿತೀಯ ಸ್ಥಾನ, ಲಾಂಗ್ಜಂಪ್ ಹಾಗೂ 100 ಮೀಟರ್ ಓಟದಲ್ಲಿ ತೃತೀಯ ಸ್ಥಾನ, ಲಿಖಿತ್ ಆರ್. ನಾಯಕ್ ಶಾಟ್ಪಟ್ನಲ್ಲಿ ಪ್ರಥಮ, ಡಿಸ್ಕಸ್ ಹಾಗೂ ಜಾವೆಲಿನ್ ಥ್ರೋನಲ್ಲಿ ದ್ವಿತೀಯ ಸ್ಥಾನ, ಸಚಿನ್ ಎಸ್. ಮಾಂಗ್ 100 ಹಾಗೂ 200 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ, ಎಸ್.ಎಂ.ಕೃತಿಕ್ ಶಾಟ್ಪಟ್ನಲ್ಲಿ ದ್ವಿತೀಯ ಸ್ಥಾನ ಪಡೆದರು.

ಮಹಿಳೆಯರ ವಿಭಾಗ:

ಸಿ.ಎ.ಸೌಪರ್ಣಿಕಾ ಹೈಜಂಪ್ನಲ್ಲಿ ಪ್ರಥಮ ಸ್ಥಾನ, 200 ಹಾಗೂ 400 ಮೀಟರ್ ಓಟದಲ್ಲಿ ದ್ವಿತೀಯ, ಭಾವನಾ ರೆಡ್ಡಿ ಡಿಸ್ಕಸ್ ಥ್ರೋ, ಶಾಟ್ಪಟ್ನಲ್ಲಿ ದ್ವಿತೀಯ ಸ್ಥಾನ ಹಾಗೂ ಜಾವೆಲಿನ್ ಥ್ರೋನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಪುರುಷರ ವಿಭಾಗದ 4X100 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಹಾಗೂ ಮಹಿಳೆಯರ ವಿಭಾಗದಲ್ಲಿ 4X100 ಮೀಟರ್ ರಿಲೇ ಓಟದಲ್ಲಿ ತೃತೀಯ ಸ್ಥಾನ ಪಡೆದು ವೈಯುಕ್ತಿಕ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.