ಶಿವಮೊಗ್ಗ: ಇಲ್ಲಿನ ಕುವೆಂಪು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥ್ಯಾವರ್ ಚಂದ್ ಗೆಹಲೋತ್ ಅವರ ಭಾಷಣದ ವೇಳೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ವಿರುದ್ಧ ಕೆಲವರು ಘೋಷಣೆ ಕೂಗಿದರು.

ಸಭಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಕೆಲವರು ರಾಜ್ಯಪಾಲರು ಭಾಷಣ ಮಾಡುವಾಗಲೇ ಘೋಷಣೆ ಕೂಗಲು ಆರಂಭಿಸಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಧಿಕ್ಕಾರ ಕೂಗಿದರು. ಕಪ್ಪು ಬಾವುಟ ಪ್ರದರ್ಶಿಸಿದರು. ಗದ್ದಲದ ನಡುವೆಯೇ ರಾಜ್ಯಪಾಲರು ಭಾಷಣ ಮುಂದುವರೆಸಿದರು. ಸಭಾಂಗಣ ಪ್ರವೇಶಿಸಿದ ಪೊಲೀಸರು ಘೋಷಣೆ ಕೂಗುವವರನ್ನು ಸಭಾಂಗಣದಿಂದ ಹೊರಗೆ ಕರೆತಂದು ವಾಹನದಲ್ಲಿ ಕರೆದೊಯ್ದರು.

ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ರಾಜ್ಯಪಾಲರು, 'ಘೋಷಣೆ ಕೂಗಿದ ಗುಂಪಿನ ನಾಲ್ವರು ಬಂದು ನಂತರ ನನ್ನನ್ನು ಭೇಟಿಯಾಗಲಿ. ಅವರ ಸಮಸ್ಯೆ ಆಲಿಸುವೆ. ಏನಾದರೂ ತೊಂದರೆ ಆಗಿದ್ದರೆ ಪರಿಹರಿಸುವೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.