ಸಾಗರ: ‘ಮಂಗನ ಕಾಯಿಲೆಗೆ ಈ ಹಿಂದೆ ನೀಡುತ್ತಿದ್ದ ಲಸಿಕೆ ಪರಿಣಾಮಕಾರಿಯಲ್ಲ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ನಿಟ್ಟಿನಲ್ಲಿ ನೂತನ ಲಸಿಕೆ ಕಂಡು ಹಿಡಿಯಲು ಹೈದರಾಬಾದ್ನ ಸಂಸ್ಥೆಯೊಂದಕ್ಕೆ ಸರ್ಕಾರದ ಸಿಎಸ್ಆರ್ ನಿಧಿನಿಂದ ₹ 10 ಕೋಟಿ ಅನುದಾನ ನೀಡಿದ್ದು, 2026ನೇ ಸಾಲಿನ ಹೊತ್ತಿಗೆ ಲಸಿಕೆ ಲಭ್ಯವಾಗಲಿದೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ತಾಲ್ಲೂಕಿನ ಮಂಗನ ಕಾಯಿಲೆ ಪೀಡಿತ ಪ್ರದೇಶವಾದ ಅರಳಗೋಡು ಗ್ರಾಮದ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಅವರು ಗ್ರಾಮಸ್ಥರ ಅಹವಾಲು ಆಲಿಸಿದ ನಂತರ ಮಾತನಾಡಿದರು.

‘ಮಂಗನ ಕಾಯಿಲೆಗೆ ಈ ಹಿಂದೆ ನೀಡುತ್ತಿದ್ದ ಲಸಿಕೆಯಲ್ಲಿ ಫಾರ್ಮಲಿನ್ ಎಂಬ ರಾಸಾಯನಿಕದ ಅಂಶವಿದ್ದು, ಅದರ ಬಳಕೆಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿಷೇಧಿಸಿದೆ. ಆದ್ದರಿಂದ ಈಗ ಬಳಸುತ್ತಿದ್ದ ಲಸಿಕೆ ಬಳಕೆಗೆ ತಡೆ ನೀಡಲಾಗಿದೆ’ ಎಂದು ಹೇಳಿದರು.

‘ನೂತನ ಲಸಿಕೆ ಕಂಡು ಹಿಡಿಯುವುದು ಹೆಚ್ಚು ಲಾಭದಾಯಕವಲ್ಲ ಎನ್ನುವ ಕಾರಣಕ್ಕೆ ಈ ವಿಷಯದಲ್ಲಿ ಔಷಧ ಕಂಪನಿಗಳು ಆಸಕ್ತಿ ತೋರುತ್ತಿಲ್ಲ. ಆದರೆ, ಸರ್ಕಾರ ಇದು ತನ್ನ ಜವಾಬ್ದಾರಿ ಎಂಬ ನಿಲುವಿನಿಂದ ಲಸಿಕೆ ಅವಿಷ್ಕಾರಕ್ಕೆ ಮುಂದಾಗಿದೆ’ ಎಂದು ಮಾಹಿತಿ ನೀಡಿದರು.

‘ಈ ಹಿಂದಿನ ವರ್ಷಗಳಲ್ಲಿ ಸಂಭವಿಸಿದ ರೀತಿಯಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಮಂಗನ ಕಾಯಿಲೆಯಿಂದ ಸಾವು ಉಂಟಾಗದಂತೆ ನೋಡಿಕೊಳ್ಳುವ ಸಂಬಂಧ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾಯಿಲೆ ಪೀಡಿತರಿಗೆ ರಾಜ್ಯ ಸರ್ಕಾರದ ಜೊತೆ ಒಡಂಬಡಿಕೆ ಹೊಂದಿರುವ ಯಾವುದೇ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಮಂಗನ ಕಾಯಿಲೆ ಲಕ್ಷಣಗಳು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದಾಗ ಕಾಯಿಲೆ ಖಚಿತ ಪಡಿಸುವ ವರದಿ ಬರಲು ಹೆಚ್ಚಿನ ಸಮಯ ಹಿಡಿಯುತ್ತಿದೆ. ಕಾಯಿಲೆ ದೃಢೀಕರಿಸುವ ಪ್ರಯೋಗಾಲಯ ಕಾಯಿಲೆ ಹೆಚ್ಚು ಕಾಣಿಸಿಕೊಳ್ಳುವ ಪ್ರದೇಶದಲ್ಲೇ ಇರಬೇಕು ಎಂಬ ಬೇಡಿಕೆ ಇದೆ. ಈ ಬಗ್ಗೆ ತಜ್ಞರೊಂದಿಗೆ ಸಂಪರ್ಕಿಸಿ ತುರ್ತು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸ್ಥಳೀಯರ ಬೇಡಿಕೆಯಂತೆ ಅರಳಗೋಡು ಗ್ರಾಮದ ಆಸ್ಪತ್ರೆಗೆ ಸಂಚಾರಿ ಆರೋಗ್ಯ ಘಟಕದ ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿನ ಆಸ್ಪತ್ರೆಗೆ ಅಗತ್ಯವಿರುವ ವೈದ್ಯ ಸಿಬ್ಬಂದಿ ನೇಮಕ ಮಾಡಿ ಅವರಿಗೆ ಸೂಕ್ತ ವಸತಿ ಸೌಲಭ್ಯ ನೀಡಲಾಗುವುದು’ ಎಂದು ತಿಳಿಸಿದರು.

‘ಮಂಗನ ಕಾಯಿಲೆಯಿಂದ ಮೃತಪಟ್ಟವರಿಗೆ ಕನಿಷ್ಠ ₹ 10 ಲಕ್ಷ ಪರಿಹಾರ ದೊರಕುವಂತಾಗಬೇಕು. ಈ ಹಿಂದೆ ಮೃತಪಟ್ಟ ಕೆಲವರಿಗೆ ₹ 2 ಲಕ್ಷ ಪರಿಹಾರ ದೊರಕಿದೆ. ಇನ್ನೂ ಕೆಲವರಿಗೆ ಪರಿಹಾರವೇ ವಿತರಣೆಯಾಗಿಲ್ಲ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಷ್ ಭಾನು, ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ಪ್ರಮುಖರಾದ ರವಿಕುಮಾರ್, ಪಲ್ಲವಿ, ಶಿವಕುಮಾರ್, ಸುಂದರೇಶ್, ಕಲಸೆ ಚಂದ್ರಪ್ಪ, ಮೇಘರಾಜ್, ಅನ್ಸರ್ ಅಹ್ಮದ್, ವೈ.ಆರ್.ರಾಜೇಶ್, ಪ್ರಭಾವತಿ ಚಂದ್ರಕಾಂತ್, ಡಾ.ಹರ್ಷವರ್ದನ್, ಡಾ.ರಜನಿ, ಅನಿತಾಕುಮಾರಿ, ಲಕ್ಷ್ಮಿ ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.