ಆನವಟ್ಟಿ: ಬಿಜೆಪಿ ಹಾಗೂ ಬಿ.ವೈ.ರಾಘವೇಂದ್ರ ಅವರು ಗೆಲುವವರೆಗೆ ಪಾದರಕ್ಷೆ ಹಾಕುವುದಿಲ್ಲ ಎಂದು ಶಪಥ ಮಾಡಿದ್ದ ಸೊರಬ ತಾಲ್ಲೂಕಿನ ನೇರಲಗಿ ಗ್ರಾಮದ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ರುದ್ರೇಶ್ ಕುಮ್ಮೂರು ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಅವರು ಸೋಮವಾರ ಭೇಟಿಯಾಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗೌರವಿಸಿದರು.

ನೂತನ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಪಕ್ಷ ಹಾಗೂ ನನ್ನ ಗೆಲುವಿಗಾಗಿ ಪ್ರಮಾಣಿಕವಾಗಿ ದುಡಿಯುವ ರುದೇಶ್ ಅವರಂತಹ ಅಪಾರ ಸಂಖ್ಯೆಯ ಕಾರ್ಯಕರ್ತರಿಂದಾಗಿ ಇಂದು ದೊಡ್ಡ ಗೆಲುವು ಸಿಕ್ಕಿದೆ. ನನ್ನ ಸ್ಪರ್ಧೆ ಖಚಿತವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 100 ದಿವಸಗಳ ಕಾಲ ಅವರು ಪಾದರಕ್ಷೆ ಧರಿಸಿಲ್ಲ. ನಾನು ಗೆದ್ದರೆ 101 ತೆಂಗಿನಕಾಯಿ ಒಡೆಯುವುದಾಗಿಯೂ ಅವರು ಹರಕೆ ಮಾಡಿಕೊಂಡಿದ್ದರು. ಗೆಲುವಿಗೆ ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳು’ ಎಂದರು.

ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ 101 ತೆಂಗಿನಕಾಯಿ ಒಡೆಯುವ ಹರಕೆ ತೀರಿಸುವ ಕಾರ್ಯಕ್ಕೆ ರಾಘವೇಂದ್ರ ಅವರು ಮೊದಲ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಉಳಿದ ತೆಂಗಿನಕಾಯಿಗಳನ್ನು ಕಾರ್ಯಕರ್ತರು ಒಡೆದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.