ಶಿವಮೊಗ್ಗ: ಇಲ್ಲಿನ ಸೋಗಾನೆಯ ನೂತನ ವಿಮಾನ ನಿಲ್ದಾಣ ಉದ್ಘಾಟನೆಯ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿ.ಎಸ್.ಯಡಿಯೂರಪ್ಪ ಅವರಿಗೆ ಜನ್ಮದಿನದ ಕೊಡುಗೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ವಿಮಾನ ನಿಲ್ದಾಣವನ್ನು ಯಡಿಯೂರಪ್ಪ ಅವರು ಶಿವಮೊಗ್ಗದ ಜನತೆಗೆ ಕೊಡುಗೆ ಕೊಟ್ಟಿದ್ದಾರೆ. ಹೀಗಾಗಿ ಅವರ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣ ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗಿದೆ. ಇದು ಯೋಚನೆ ಮಾಡಿ ಕೈಗೊಂಡ ನಿರ್ಧಾರ ಎಂಬುದು ನನ್ನ ಭಾವನೆ’ ಎಂದರು.

‘ಚುನಾವಣಾ ರಾಜಕಾರಣ ದಿಂದ ನಿವೃತ್ತರಾದ ಯಡಿಯೂರಪ್ಪ ಅವರನ್ನು ಮುಂದೆ ಪಕ್ಷ ಹೇಗೆ ಬಳಕೆ ಮಾಡಿಕೊಳ್ಳ ಲಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೋಶಿ, ‘ಬಿಜೆಪಿ ಎಲ್ಲ ಹಂತದಲ್ಲಿ ಯಡಿಯೂರಪ್ಪ ಅವರ ಅನುಭವ, ನಾಯಕತ್ವವನ್ನು ಬಳಕೆ ಮಾಡಿಕೊಳ್ಳಲಿದೆ. ಪಕ್ಷ ಬಯಸಿದಾಗಲೆಲ್ಲ ನಾನು ಲಭ್ಯವಿರುತ್ತೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ಹೀಗಾಗಿ ಸಂಪೂರ್ಣವಾಗಿ ಅವರ ನಾಯಕತ್ವವನ್ನು ಬಳಕೆ ಮಾಡಿ ಕೊಳ್ಳಲಾಗುವುದು’ ಎಂದರಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.