ಶಿವಮೊಗ್ಗ: ‘ಪ್ರತಿಯೊಬ್ಬರೂ ವಿಶ್ವೇಶ್ವರಯ್ಯ ಅವರಂತೆ ಶ್ರದ್ಧೆ ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಯಶಸ್ಸು ಕಾಣಬೇಕು’ ಎಂದು ಹಿರಿಯ ಸಾಹಿತಿ, ಭದ್ರಾವತಿಯ ಜಿ.ವಿ.ಸಂಗಮೇಶ್ವರ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬುಧವಾರ ಹಮ್ಮಿಕೊಂಡಿದ್ದನ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವೇಶ್ವರಯ್ಯ ತಮಗೆ ವಹಿಸಿದ ಕೆಲಸಕ್ಕೆ ಬೆನ್ಬು ತೋರಿಸದೇ ಸಾಧನೆ ಮಾಡಿದರು. ನೆಪಹೇಳುವ ಇವತ್ತಿನ ಯುವಕರಿಗೆ ಅವರು ಆದರ್ಶವಾಗಿದ್ದಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಸರ್. ಎಂ. ವಿ. ಇವತ್ತಿನ ತಾಂತ್ರಿಕ ವ್ಯವಸ್ಥೆಗೆ, ಯುವಜನರ ಬದುಕಿಗೆ ಮಾದರಿಯಾಗಿದ್ದಾರೆ ಎಂದರು.

ಪ್ರಾಚಾರ್ಯ ಪ್ರಸನ್ನಕುಮಾರ್ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಂ.ಎ.ಪ್ರಧಾನ್ ಪ್ರಾರ್ಥನೆ ಹಾಡಿದರು. ಅಜ್ಜಪ್ಪಾಚಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಿ. ಗಣೇಶ್, ಕವಿಗಳಾದ ಇಂದಿರಾ ಪ್ರಕಾಶ್ ಉಪಸ್ಥಿತರಿದ್ದರು. ಮನೋಜ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.