ಶಿವಮೊಗ್ಗ: ಕೊರೊನಾ ಆತಂಕ, ಬೆಲೆ ಏರಿಕೆ ಮಧ್ಯೆಯೂಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದ ಖರೀದಿಗೆ ಜನರು ಪ್ರಮುಖ ಮಾರುಕಟ್ಟೆಗಳಲ್ಲಿ ಮುಗಿಬಿದ್ದಿದ್ದರು.

ದಿನಸಿ, ತರಕಾರಿ, ಹಣ್ಣು, ಹೂಗಳ ಬೆಲೆ ಗಗನಕ್ಕೇರಿದ್ದರೂ ಜನರ ಖರೀದಿಯ ಉತ್ಸಾಹ ಕಡಿಮೆಯಾಗಿರಲಿಲ್ಲ. ಗಾಂಧಿ ಬಜಾರ್, ವಿನೋಬನಗರ, ಕುವೆಂಪು ರಸ್ತೆ, ಬಿ.ಎಚ್.ರಸ್ತೆಗಳ ಬದಿ ಇಟ್ಟುಕೊಂಡಿದ್ದ ಮಾವಿನ ಸೊಪ್ಪು, ಬೇವಿನ ಸೊಪ್ಪುಗಳನ್ನು
ಖರೀದಿಸಿದರು. ಕೆಲವು ವೃತ್ತಗಳಲ್ಲೂ ಹಣ್ಣು, ಹಂಪಲು ಮಾರಾಟ ಜೋರಾಗಿತ್ತು.

ವಿನೋಬ ನಗರದ ತರಕಾರಿ ಮಾರುಕಟ್ಟೆಯಲ್ಲೂ ಜನಜಂಗುಳಿ ಇತ್ತು. ರಸ್ತೆಯ ಇಕ್ಕೆಲಗಳಲ್ಲೂ ವ್ಯಾಪಾರಿಗಳು ತರಕಾರಿ, ಹಣ್ಣು, ಹೂ ಮಾರಾಟ ಮಾಡುತ್ತಿದ್ದರು.

ಬಹುತೇಕ ಜನರು ಮಾಸ್ಕ್ ಧರಿಸದೇ, ಅಂತರ ಕಾಪಾಡಿಕೊಳ್ಳದೆ ಜನಜಂಗುಳಿಯ ಮಧ್ಯೆ ಸಾಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ವ್ಯಾಪಾರಿಗಳು ಮತ್ತು ಅಂಗಡಿಗಳ ಸಿಬ್ಬಂದಿ ಮಾಸ್ಕ್ ಧರಿಸಿದ್ದರು.

ಬಸ್ಗಳಲ್ಲೂ ಜನ ಸಂದಣಿ: ಕೆಎಸ್ಆರ್ಟಿಸಿ ನೌಕರರ ಮುಷ್ಕರದ ಕಾರಣ ಗ್ರಾಮೀಣ ಪ್ರದೇಶಗಳಿಂದ ಹಬ್ಬದ ಖರೀದಿಗೆ
ಬರುವ ಜನರು ಖಾಸಗಿ ಬಸ್ಗಳ ಮೇಲೆ ಅವಲಂಬಿತರಾಗಿದ್ದರು. ಬಹುತೇಕ ಬಸ್ಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಬರುತ್ತಿದ್ದವು. ಬಸ್ಗಳಲ್ಲೂ ಅಂತರ ಕಾಣದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.