ರಿಪ್ಪನ್‌ಪೇಟೆ : ಜೈನ ನೆಲೆಗಳ ಚರಿತ್ರಾರ್ಹ ಮತ್ತು ಧಾರ್ಮಿಕ ಮಹತ್ವವುಳ್ಳ ಕ್ಷೇತ್ರಗಳ ಅಧ್ಯಯನ ಹಾಗೂ ಸಂಶೋಧನೆ ವರ್ತಮಾನದ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪ್ರಾಚೀನ ಜೈನ ಕ್ಷೇತ್ರಗಳು, ಶಾಸನ, ಜಿನಮಂದಿರ, ವಿಗ್ರಹಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್.ಎಸ್. ರಂಗರಾಜು ಪ್ರತಿಪಾದಿಸಿದರು.

ಹೊಂಬುಜ ಮಠದ ಸಭಾಂಗಣದಲ್ಲಿ ನಡೆದ ಎರಡು ದಿನಗಳ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ಷೇತ್ರಾಧ್ಯಯನ, ಉತ್ಖನನ ಮಾಡುವ ಕಾರ್ಯದಲ್ಲಿ ಹಂಪಿ ವಿಶ್ವವಿದ್ಯಾಲಯ ಕಾರ್ಯಕ್ಕೆ ಶ್ರೀಕ್ಷೇತ್ರ ಹೊಂಬುಜ ಪ್ರೋತ್ಸಾಹ ಹಿರಿದು ಎಂದರು.

‘ಪ್ರಾಚೀನ ಕರ್ನಾಟಕದ ಜೈನ ನೆಲೆಗಳು’ ಕುರಿತು ವಿಚಾರ ಸಂಕಿರಣ ನಡೆಯಿತು.ತದ ನಂತರ ನಡೆದ ಗೋಷ್ಠಿಯಲ್ಲಿ ಹೊಂಬುಜದ ಕುರಿತು ಪ್ರೊ.ನಿಟ್ಟೂರು ದೇವೇಂದ್ರಕುಮಾರ, ಲಾತೂರು ಕುರಿತು ಸುಜಾತ ಶಾಸ್ತ್ರಿ, ಕನಕಗಿರಿ ಕುರಿತು ಡಾ. ಪದ್ಮಿನಿ ನಾಗರಾಜು ಹಾಗೂ ಕೆಳದಿ ಕವಲೇದುರ್ಗದ ಕುರಿತು ಡಾ. ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಐತಿಹಾಸಿಕ ನೆಲೆಗಳ ಸಮಗ್ರ ವಿವರಣೆ ನೀಡಿದರು.

ಹಂಪಿ ಕನ್ನಡ ವಿ.ವಿ. ಮತ್ತು ಅಭೇರಾಜ್ ಬಲ್ಡೋಟಾ ಜೈನ ಸಂಸ್ಕೃತಿ ಅಧ್ಯಯನ ಪೀಠ ಆಯೋಜಿಸಿದ್ದ ವಿಚಾರ ಸಂಕಿರಣದ 4ನೇ ಗೋಷ್ಠಿಯಲ್ಲಿ ಶ್ರವಣಬೆಳಗೊಳದ ಕುರಿತು ಡಾ. ತಮಿಳ್ ಸೆಲ್ವಿಂ, ದೇವಗಿರಿ ಕುರಿತು ಡಾ. ರವಿ ನವಲಗುಂದ, ಕೋಗುಳಿ ಕುರಿತು ಡಾ. ಆರ್.ಬಿ. ಕುಮಾರ ಮಾತನಾಡಿದರು.

ಜೈನ ಐತಿಹಾಸಿಕ ಕ್ಷೇತ್ರಗಳ ಸಮಗ್ರ ಅಧ್ಯಯನ, ರಕ್ಷಣೆ ಹಾಗೂ ದಾಖಲಾತಿಗಳ ಬಗ್ಗೆ ವಿದ್ವಾಂಸರೊಂದಿಗೆ ಸಮಾಲೋಚನೆ ನಡೆಸಿದರು. ವಿಚಾರ ಸಂಕಿರಣದಲ್ಲಿ ಕೋಣಂದೂರು ಶರಾವತಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿವೃಂದ, ಪ್ರಾಧ್ಯಾಪಕರಾದ ಪಿ.ಎಂ.ಎನ್. ಶಂಕರ, ಸುಧಾಕರ, ಶ್ರುತಿ, ಗುರುರಾಜ್, ಆಶಾ ಮಠದ ಆಡಳಿತಾಧಿಕಾರಿ ಜಿ. ಸುಧೀರ ಕುಸನಾಳೆ, ಮಂಜಪ್ಪರವರು, ಸಂತೋಷ ಕುಮಾರ್, ಶ್ರೀಕಾಂತ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.