ತುಮಕೂರಿನಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಕೇಸರಿ ಶಾಲು ಧರಿಸಿ ಹಿಂದೂ ಮಹಾಗಣಪತಿಗೆ ಪೂಜೆ ಸಲ್ಲಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾಜಿ ಸಚಿವ ಸೊಗಡು ಶಿವಣ್ಣ ಮುಖಂಡ ಟಿ.ಬಿ.ಶೇಖರ್ ಇತರರು ಹಾಜರಿದ್ದರು
ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಗಮನ ಸೆಳೆದ ಕೋಲಾಟ ಪ್ರದರ್ಶನ
ಪುನೀತ್ ಕೆರೆಹಳ್ಳಿ ರಘು ಸಕಲೇಶಪುರ ವಶಕ್ಕೆ
ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಲು ಶನಿವಾರ ನಗರಕ್ಕೆ ಬಂದಿದ್ದ ಬಜರಂಗದಳದ ಮುಖಂಡರಾದ ರಘು ಸಕಲೇಶಪುರ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಯಲ್ಲಿ ಜಿಲ್ಲೆಯ ಹೊರಗಿನವರ ಪಾಲ್ಗೊಳ್ಳುವಿಕೆಗೆ ನಿರ್ಬಂಧ ವಿಧಿಸಲಾಗಿತ್ತು. ನಿರ್ಬಂಧದ ಮಧ್ಯೆ ಮೆರವಣಿಗೆಯಲ್ಲಿ ಭಾಗವಹಿಸಲು ಬಂದಿದ್ದ ಇಬ್ಬರನ್ನು ವಶಕ್ಕೆ ಪಡೆಯಲಾಯಿತು. ಮೆರವಣಿಗೆ ಸಾಗಿದ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 2 ಡಿವೈಎಸ್‌ಪಿ 9 ಇನ್‌ಸ್ಪೆಕ್ಟರ್ 20 ಸಬ್ ಇನ್‌ಸ್ಪೆಕ್ಟರ್ 62 ಎಎಸ್ಐ 520 ಪೊಲೀಸ್ ಕಾನ್‌ಸ್ಟೇಬಲ್ 100 ಗೃಹರಕ್ಷಕ ದಳ 3 ಕೆಎಸ್ಆರ್‌ಪಿ 5 ಡಿಎಆರ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ರಸ್ತೆ ಬಂದ್
ಗಣಪತಿ ವಿಸರ್ಜನಾ ಮೆರವಣಿಗೆ ನಿಮಿತ್ತ ನಗರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಬಿ.ಎಚ್.ರಸ್ತೆ ಮಂಡಿಪೇಟೆ ಮುಖ್ಯರಸ್ತೆ ಅಶೋಕ ರಸ್ತೆ ಹೊರಪೇಟೆ ರಸ್ತೆಯನ್ನು ಕೆಲ ಕಾಲ ಬಂದ್ ಆಗಿತ್ತು. ಬಿ.ಎಚ್.ರಸ್ತೆಯ ಮುಖಾಂತರ ಬಸ್ ನಿಲ್ದಾಣಕ್ಕೆ ಹೋಗುವವರು ಕೋತಿತೋಪು ಬಾರ್‌ಲೈನ್ ರಸ್ತೆ ಎಂ.ಜಿ.ರಸ್ತೆ ಮೂಲಕ ತೆರಳಿದರು.