ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಗತ್‌ಸಿಂಗ್‌ ಸ್ಮರಣೆ: ಪಂಜಿನ ಮೆರವಣಿಗೆ

Published : 28 ಸೆಪ್ಟೆಂಬರ್ 2024, 16:18 IST
Last Updated : 28 ಸೆಪ್ಟೆಂಬರ್ 2024, 16:18 IST
ಫಾಲೋ ಮಾಡಿ
Comments

ತುಮಕೂರು: ಭಗತ್‌ಸಿಂಗ್‌ ಜನ್ಮ ದಿನ ಆಚರಣೆ ಪ್ರಯುಕ್ತ ನಗರದಲ್ಲಿ ಶನಿವಾರ ಸಂಜೆ ಎಐಡಿಎಸ್‌ಒ, ಎಐಎಂಎಸ್‌ಎಸ್‌ ಸಂಘಟನೆಗಳಿಂದ ಪಂಜಿನ ಮೆರವಣಿಗೆ ಏರ್ಪಡಿಸಲಾಗಿತ್ತು.

ಎಐಯುಟಿಯುಸಿ ಜಿಲ್ಲಾ ಗೌರವಾಧ್ಯಕ್ಷೆ ಮಂಜುಳಾ ಜೂನಿಯರ್‌ ಕಾಲೇಜು ಬಳಿ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಬಿ.ಎಚ್‌.ರಸ್ತೆಯಲ್ಲಿ ಸಾಗಿ, ಭದ್ರಮ್ಮ ಛತ್ರ ವೃತ್ತ, ಎಸ್‌.ಎಸ್‌.ವೃತ್ತದ ಮುಖಾಂತರ ವಿಶ್ವವಿದ್ಯಾಲಯದ ಬಳಿ ಕೊನೆಗೊಂಡಿತು. ಹತ್ತಾರು ಜನ ವಿದ್ಯಾರ್ಥಿಗಳು, ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು ಹೆಜ್ಜೆ ಹಾಕಿದರು.

‘ಭಗತ್‌ ಸಿಂಗ್‌ ದೇಶದ ಪ್ರಗತಿಗೆ ಮಾರಕವಾಗಿದ್ದ ಕೋಮುವಾದ, ಅಸಮಾನತೆ, ಶೋಷಣೆ, ಅಹಿಂಸೆಯ ವಿರುದ್ಧ ಹೋರಾಡಿದ್ದರು. ಉಳ್ಳವರ ಪರವಾದ ಸಾಮಾಜಿಕ ವ್ಯವಸ್ಥೆ ನಾಶಗೊಳಿಸಿ, ಸಮಾಜವಾದಿ ವ್ಯವಸ್ಥೆಯ ನಿರ್ಮಾಣವಾಗಬೇಕು ಎಂದು ಕನಸು ಕಂಡಿದ್ದರು. ಪ್ರಸ್ತುತ ಭಾರತಕ್ಕೆ ಭಗತ್‌ ಸಿಂಗ್‌ ಅವರ ವಿಚಾರಗಳು ಆಶಾಕಿರಣವಾಗಿವೆ’ ಎಂದು ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷೆ ಎಂ.ವಿ.ಕಲ್ಯಾಣಿ ಅಭಿಪ್ರಾಯಪಟ್ಟರು.

ಎಐಎಂಎಸ್‌ಎಸ್‌ ಜಿಲ್ಲಾ ಘಟಕದ ಕಾರ್ಯದರ್ಶಿ ರತ್ನಮ್ಮ, ಎಐಡಿಎಸ್‌ಒ ಜಿಲ್ಲಾ ಘಟಕದ ಅಧ್ಯಕ್ಷೆ ಅಶ್ವಿನಿ, ಕಾರ್ಯದರ್ಶಿ ಬಿ.ಸಿ.ಲಕ್ಕಪ್ಪ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT