ಪುರವರ ಹೋಬಳಿ ಕೊರಟಗೆರೆ ಕ್ಷೇತ್ರದಲ್ಲಿ ಬರುವುದರಿಂದ ಅಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಪುರವರ ಕೇಂದ್ರ ಸ್ಥಾನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ನಾಡಕಚೇರಿ ಬಾಡಿಗೆ ಕಟ್ಟಡದಲ್ಲಿದೆ. ಇಮ್ಮಡಗೊಂಡನಹಳ್ಳಿ ಸೇತುವೆ ಹಾಗೂ ಪುರವರ-ಐಡಿಹಳ್ಳಿ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಹಳ್ಳಗಳ ಬಳಿ ಸೇತುವೆ ಇಲ್ಲ. ರಮೇಶ್ ರಾಮನಹಳ್ಳಿ ದ್ವೀಪವಾಗುವ ಗ್ರಾಮ ಗ್ರಾಮದ ಸುತ್ತ ನದಿ ಹಾಗೂ ಕೆರೆಗಳ ಕೋಡಿ ನೀರು ಸುತ್ತುವರಿದು ದ್ವೀಪದಂತಾಗಿದ್ದ ಸಂದರ್ಭದಲ್ಲಿ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಶಾಸಕ ಪರಮೇಶ್ವರ ಜಿಲ್ಲಾಧಿಕಾರಿ ತಹಶೀಲ್ದಾರ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ್ದರೂ ಈವರೆಗೆ ಗ್ರಾಮದ ಬಳಿ ಸೇತುವೆ ನಿರ್ಮಿಸಿಲ್ಲ. ವೇಣುಗೋಪಾಲ್ ಶಾಲೆಗೆ ಹೋಗಲು ಕಷ್ಟ ನದಿ ಹರಿಯುವ ಮೊದಲು ಸೇತುವೆ ಹಾಗೂ ರಸ್ತೆ ಚನ್ನಾಗಿದ್ದರಿಂದ ಗ್ರಾಮಕ್ಕೆ ಶಾಲಾ ವಾಹನ ಬರುತ್ತಿತ್ತು. ಹಲವುರು ಸೈಕಲ್‌ನಲ್ಲಿ ಶಾಲೆಗೆ ತೆರಳುತ್ತಿದ್ದರು. ಆದರೆ ಈಗ ಸೇತುವೆ ಹಾಳಾಗಿದ್ದು ರಸ್ತೆ ತುಂಬಾ ಗುಂಡಿ ಬಿದ್ದಿರುವುದರಿಂದ ಅತ್ತ ಶಾಲಾ ವಾಹನವು ಬರುತ್ತಿಲ್ಲ. ಸೈಕಲ್‌ಗಳಲ್ಲಿ ತೆರಳಲು ಕಷ್ಟವಾಗುತ್ತಿದೆ. ಜನ್ಯ-ನಿತ್ಯಶ್ರೀ ವಿದ್ಯಾರ್ಥಿನಿಯರು