ತಿಪಟೂರು: ತಾಲ್ಲೂಕಿನ ಹುಚ್ಚನಹಟ್ಟಿ ಬಳಿಯ ಎತ್ತಿನಹೊಳೆ ಯೋಜನೆ ಕಾಮಗಾರಿ ಸ್ಥಳದಲ್ಲಿ ಗುಂಡಿಗೆ ಬಿದ್ದು ಮೃತಪಟ್ಟ ಬಾಲಕರಾದ ಯದುವೀರ್(8) ಮತ್ತು ಮನೋಹರ್(10) ಅವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರವನ್ನು ಬುಧವಾರ ನೀಡಲಾಯಿತು.

ಘಟನೆ ನಡೆದ ದಿನದಂದು ತಾತ್ಕಾಲಿಕ ಪರಿಹಾರವಾಗಿ ಎರಡೂ ಕುಟುಂಬಗಳಿಗೆ ತಲಾ ₹5 ಲಕ್ಷ ನೀಡಲಾಗಿತ್ತು.

ಬುಧವಾರ ಎತ್ತಿನಹೊಳೆ ಅಧಿಕಾರಿಗಳು, ಶಾಸಕ ಕೆ.ಷಡಕ್ಷರಿ ಹಾಗೂ ಚಿತ್ರದುರ್ಗದ ಕೃಷ್ಣಯಾದವನಂದ ಸ್ವಾಮೀಜಿ ಮೃತರ ಕುಟುಂಬಕ್ಕೆ ಪರಿಹಾರ ವಿತರಿಸಿದರು.

ಯಾದವ ಸಮುದಾಯದ ಮರಿಯಪ್ಪ, ರಾಜ್ಯ ಕಾಡುಗೊಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಬಾಲುರಾಜು, ಪ್ರಕಾಶ್ಯಾದವ್ ಮತ್ತು ಹರೀಶ್ ಅಮ್ಮನಹಟ್ಟಿ, ಸಂಘದ ಪದಾಧಿಕಾರಿಗಳು, ಎತ್ತಿನಹೊಳೆ ಯೋಜನೆ ಇಲಾಖಾ ಅಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.