ತುಮಕೂರು: ಪೊಲೀಸ್ ಗುಪ್ತಚರ ವಿಭಾಗದ ಎಎಸ್ಐ ದೊಡ್ಡಯ್ಯ ಅವರ ಮೇಲೆ ವಕೀಲ ರವಿಕುಮಾರ್ ಮತ್ತು ಇತರರು ಹಲ್ಲೆ ಮಾಡಿದ್ದು, ಕೂಡಲೇ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್ ಪ್ರಜಾ ಸೇನೆ, ಇತರೆ ಸಂಘಟನೆಗಳಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

‘ಕೋರ್ಟ್ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಮಾಹಿತಿ ಪಡೆದುಕೊಳ್ಳಲು ಹೋಗಿದ್ದ ದೊಡ್ಡಯ್ಯ ಅವರ ಮೇಲೆ ರವಿಕುಮಾರ್ ಮತ್ತು ಇತರರು ಹಲ್ಲೆ ಮಾಡಿದ್ದಾರೆ. ಇಲ್ಲಿಗೆ ಬರಲು ನಿನಗೆ ಅನುಮತಿ ನೀಡಿದವರು ಯಾರು? ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಜಾತಿ ನಿಂದನೆಯ ಮಾತುಗಳನ್ನಾಡಿದ್ದಾರೆ’ ಎಂದು ಪ್ರಜಾಸೇನೆ ಅಧ್ಯಕ್ಷ ಕೆಂಪರಾಜು ಆರೋಪಿಸಿದರು.

‘ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಈ ಹಿಂದೆ ಇದೇ ಕೋರ್ಟ್ನಲ್ಲಿ ಕೆಲಸ ಮಾಡಲು ಬರುತ್ತಿದ್ದ ಎಂದು ಮಾತನಾಡುತ್ತ ಹಲ್ಲೆ ನಡೆಸಿದ್ದಾರೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಜಾತಿ ನಿಂದನೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ನ್ಯಾಯ ದೊರಕಿಸಿಕೊಡಬೇಕು’ ಎಂದು ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಯಿತು. ವಿವಿಧ ಸಂಘಟನೆಗಳ ಮುಖಂಡರಾದ ನವೀನ್, ಅನ್ನಪೂರ್ಣ, ಸುಮಾ, ನಿರ್ಮಲಾ, ಕುಪ್ಪೂರು ರಂಗಪ್ಪನಾಯಕ ಮೊದಲಾದವರು ಪಾಲ್ಗೊಂಡಿದ್ದರು.

ರವಿಕುಮಾರ್ ವಿರುದ್ಧ ಎಫ್ಐಆರ್

ತುಮಕೂರು: ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ವಕೀಲ ರವಿಕುಮಾರ್ ಅವರ ತಂದೆ ಚಂದ್ರಶೇಖರ್ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಾಲ್ಲೂಕಿನ ಹೊನ್ನೇನಹಳ್ಳಿ ಬಳಿಯ ರವಿಕುಮಾರ್ ಜಮೀನಿನಲ್ಲಿ ತುಮಕೂರು– ರಾಯದುರ್ಗ ರೈಲ್ವೆ ಕಾಮಗಾರಿ 66 ಕೆ.ವಿ ಲೈನ್ ಅಳವಡಿಸಲಾಗುತ್ತಿದೆ. ಈ ಬಗ್ಗೆ ಮಾಲೀಕರಿಗೆ ಮೌಖಿಕವಾಗಿ ಮತ್ತು ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಜಾರಿ ಮಾಡಲಾಗಿದೆ. ಪರಿಹಾರದ ಆದೇಶದ ಪ್ರತಿ ಸಹ ಕಳುಹಿಸಲಾಗಿದೆ. ಆದರೂ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ನೈರುತ್ಯ ರೈಲ್ವೆಯ ಎಂಜಿನಿಯರ್ ಎಲ್.ಕುಶಾಲ್ ದೂರು ನೀಡಿದ್ದಾರೆ.

‘ಸೋಮವಾರ ಮತ್ತೆ ಕೆಲಸ ಮಾಡಲು ಸ್ಥಳಕ್ಕೆ ಹೋದಾಗ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ನಗರ ಠಾಣೆಯ ಪೊಲೀಸರು ತನಿಖೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ. ಪರಿಹಾರವಾಗಿ ಹೆಚ್ಚು ಹಣ ಪಡೆಯಲು ಉದ್ದೇಶಪೂರ್ವಕವಾಗಿ ಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ. ನಿಮ್ಮ ಸ್ವಂತ ಹಣ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.