ಕೊಡಿಗೇನಹಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯ ಡಾ.ರೋಹಿತ್ ಹಾಗೂ ಆಂಬುಲೆನ್ಸ್ ಚಾಲಕ ಶ್ರೀನಿವಾಸ್ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಭಾನುವಾರ ಆರೋಗ್ಯ ಕೇಂದ್ರದ ಮುಂಭಾಗ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಧರಣಿ
ನಡೆಸಿದರು.

ಬಿಎಸ್ಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಗೋಪಾಲ್ ಮಾತನಾಡಿ, ‘ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬೇಕು. ವೈದ್ಯ ಹಾಗೂ ಆಂಬುಲೆನ್ಸ್ ಚಾಲಕ ರಾತ್ರಿ-ಹಗಲು ಸೇವೆ ಮಾಡಿದ್ದರೂ ಸಣ್ಣ ಕಾರಣದಿಂದ ಇವರಿಬ್ಬರನ್ನು ಅಮಾನತು ಮಾಡಿದ್ದಾರೆ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಆಶಾ ಕಾರ್ಯಕರ್ತೆ ನೇತ್ರಾವತಿ ಮಾತನಾಡಿ, ‘ವಿವಿಧ ಬೇಡಿಕೆಗೆ ಆಗ್ರಹಿಸಿ ನಾವು 2 ದಿನಗಳಿಂದಲೂ ಕೂಡ ಅಹೋರಾತ್ರಿ ಧರಣಿ ಮಾಡುತ್ತಿದ್ದರೂ ಕೂಡ ಕಾಟಚಾರಕ್ಕೆಂಬಂತೆ ಟಿಎಚ್ಒ ಬಿಟ್ಟರೆ ಮತ್ಯಾರು ಸೌಜನ್ಯಕ್ಕೂ ಭೇಟಿ ನೀಡಿಲ್ಲ’ ಎಂದರು.

ಧರಣಿ ಸ್ಥಳಕ್ಕೆ ಡಿಎಚ್ಒ ಡಾ.ಮಂಜುನಾಥ್ ಭೇಟಿ ನೀಡಿದರು. ಡಾ.ರೋಹಿತ್ ಅವರು ಕಮಿಷನರ್ ಬಳಿ ಮಾತನಾಡಿ ವೈದ್ಯ ಹಾಗೂ ಆಂಬುಲೆನ್ಸ್ ಚಾಲಕನ ಅಮಾನತು ವಾಪಸ್ ಪಡೆಯುವುದು, ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸಲು ವೈದ್ಯರನ್ನು ನೇಮಿಸುವಂತೆ ಈ ಭಾಗದ ಜನರ ಒತ್ತಾಯವನ್ನು ತಿಳಿಸಿದರು. ಇದಕ್ಕೆ ಒಪ್ಪಿದ ಕಮಿಷನರ್ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಭಟನಾಕಾರರು ಧರಣಿ ವಾಪಸ್ ಪಡೆದರು.

ಕೆ.ಎನ್. ಅಶ್ವತ್ಥನಾರಾಯಣ, ಸ್ತ್ರೀಶಕ್ತಿ ಸಂಘದ ಕಾರ್ಯದರ್ಶಿ ಚೈತ್ರ, ಡಿಎಸ್ಎಸ್ ಹೋಬಳಿ ಅಧ್ಯಕ್ಷ ಕೆ.ಎನ್. ಗಂಗಾಧರ್, ತೆರಿಯೂರು ಶಿವಕುಮಾರ್, ನಾಗರೆಡ್ಡಿ, ರಾಜಪ್ಪ, ಡಿ.ಜಿ. ವೆಂಕಟೇಶ್, ಶಂಕರಪ್ಪ, ಸುದ್ದೇಕುಂಟೆ ಗಂಗಾಧರ್, ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.