ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಹತ್ತಿರ ಶುಕ್ರವಾರ ಪರಿಚಯಸ್ಥರ ಸೋಗಿನಲ್ಲಿ ವೃದ್ಧೆಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ 50 ಗ್ರಾಂ ಚಿನ್ನದ ಸರವನ್ನು ದೋಚಲಾಗಿದೆ.

ನಾಗವಲ್ಲಿ ಗ್ರಾಮದ ಕೆಂಪಮ್ಮ ಸರ ಕಳೆದುಕೊಂಡವರು.

ಶುಕ್ರವಾರ ಹೊನ್ನುಡಿಕೆ ಹ್ಯಾಂಡ್ಪೋಸ್ಟ್ ನ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗಿ ಬರಲು ಬಸ್ಸಿಗಾಗಿ ರಸ್ತೆ ಪಕ್ಕ ಕೆಂಪಮ್ಮ ಕಾದು ನಿಂತಿದ್ದರು. ಅಲ್ಲಿಗೆ ಕಾರಿನಲ್ಲಿ ಬಂದ ಅಪರಿಚಿತ ವ್ಯಕ್ತಿ ಪರಿಚಯಸ್ಥರ ತರಹ ಮಾತನಾಡಿಸಿ ನಿಮ್ಮ ಮಗ ಕೃಷ್ಣ ಮತ್ತು ಕುಮಾರ ಇಬ್ಬರೂ ಗೊತ್ತು ಹೇಳಿಕೊಂಡಿದ್ದಾನೆ. ಬಳಿಕ ನಾಗವಲ್ಲಿಗೆ ಬಿಡುವುದಾಗಿ ಹೇಳಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ವಡ್ಡರಹಳ್ಳಿ ಕೆರೆ ಹತ್ತಿರ ಚಾಕು ತೋರಿಸಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.