ಕುಣಿಗಲ್: ಲಿಂಗಾಯತ ಜಾತಿ ಸೂಚಕವಲ್ಲ, ಸಂಸ್ಕಾರ ಸೂಚಕ. ಮಹನೀಯರ ಆಚಾರ ವಿಚಾರ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿ ಕಂಡುಕೊಳ್ಳುವಂತೆ ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ತಾಲ್ಲೂಕು ವೀರಶೈವ ಲಿಂಗಾಯತ ಸೇವಾ ಸಮಾಜದಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯ, ಬಸವೇಶ್ವರ ಮತ್ತು ಅಕ್ಕಮಹಾದೇವಿ ಜಯಂತಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

'ರೇಣುಕಾಚಾರ್ಯ, ಬಸವಣ್ಣ, ಸಿದ್ದಲಿಂಗೇಶ್ವರರು ಮಾನವ ಧರ್ಮ, ಕಾಯಕ ನಿಷ್ಠೆಪ್ರತಿಪಾದಿಸಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದು ಇಂದಿಗೂ ಪೂಜ್ಯನೀಯರಾಗಿದ್ದಾರೆ. ಮಹನಿಯರ ಜಯಂತಿ ಆಚರಣೆ ಒಂದು ಉತ್ಸವವಾಗದೆ, ತತ್ವ ಸಿದ್ಧಾಂತ, ಆಚಾರ ವಿಚಾರ ಅರಿವು ಮತ್ತು ಅನುಕರಣೆಯಾಗಬೇಕು. ಒಳಜಾತಿಗಳ ಸಂಘರ್ಷದಿಂದ ಒಮ್ಮತ ಮೂಡದಿರುವುದು ವೀರಶೈವ ಲಿಂಗಾಯತ ಸಮಾಜದ ದುರಂತ' ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ ಬುದ್ಧ, ಬಸವ ಮತ್ತು ಗಾಂಧಿಜೀ ಅವರು ಅಧಿಕಾರ, ಅಂತಸ್ತಿನ ಸ್ಥಾನ ಬಿಟ್ಟು, ಸರಳತೆಯಿಂದ ಸಮಾಜ ಸೇವೆಯಲ್ಲಿಯೇ ಆತ್ಮಸಂತೋಷ ಪಡೆದು ಇಂದಿಗೂ ಆದರ್ಶಪ್ರಾಯರಾಗಿದ್ದಾರೆ. ವೀರಶೈವ ಲಿಂಗಾಯತ ಧರ್ಮ ಸಮಾಜದ ಎಲ್ಲ ಧರ್ಮದವರು ಅಪ್ಪಿಕೊಂಡ ಧರ್ಮವಾಗಿದೆ ಎಂದರು.

ಶಾಸಕ ಡಾ.ರಂಗನಾಥ್, ಸಂಸ್ಕಾರ ಯುಕ್ತ ಶಿಕ್ಷಣ ಪಡೆದು, ಜೀವನದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಬೆಳಸಿಕೊಳ್ಳುವಂತೆ ಸಲಹೆ ನೀಡಿದರು.

ಸಮಾಜದ ಗೌರವಾಧ್ಯಕ್ಷ ಎಸ್.ಆರ್.ಚಂದ್ರಶೇಖರಪ್ಪ, ಸಿದ್ದಗಂಗಾ ಪದವಿ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಡಿ.ಎಸ್.ಯೋಗೀಶ್, ಕನ್ನಡ ಸಾಹಿತ್ಯ ಪರಿಷತ್ ಖಜಾಂಜಿ ರಾಮಣ್ಣ, ಪ್ರಮುಖರಾದ ಬಸವರಾಜು, ಶಿವಕುಮಾರ್, ವಸಂತಕುಮಾರ್, ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.