ಮೂಲೆ ಗುಂಪಾದ ಮೂಡಲಪಾಯ: ಕೊನೇಹಳ್ಳಿ ಯಕ್ಷಗಾನ ಕೇಂದ್ರಕ್ಕೆ ಬೇಕಿದೆ ಮರುಜೀವ
ಪ್ರಶಾಂತ್ ಕೆ.ಆರ್.
Published : 18 ನವೆಂಬರ್ 2024, 6:49 IST
Last Updated : 18 ನವೆಂಬರ್ 2024, 6:49 IST
ಫಾಲೋ ಮಾಡಿ
Comments
ಕಲೆ ಪ್ರದರ್ಶನ
‘ಕರಿರಾಯ ಚರಿತೆ’ ಮೊದಲ ಕೃತಿ
ಮೂಡಲಪಾಯ ಯಕ್ಷಗಾನಕ್ಕೆ 500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ದಾಖಲೆಗಳ ಪ್ರಕಾರ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಅಂದೇನಹಳ್ಳಿ ಮೂಡಲಪಾಯದ ಮೂಲಸ್ಥಳ. ಆ ಊರಿನ ಒಕ್ಕಲಿಗ ಸಮಾಜದ ಜೀರಿಗೆ ಕೆಂಪಯ್ಯನ ಹಿರಿಯ ಮಗ ಓದೋ ಕೆಂಪಯ್ಯನ ಮಗನಾದ ಕೆಂಪಣ್ಣಗೌಡನೇ ಮೂಡಲಪಾಯದ ಅತ್ಯಂತ ಪ್ರಾಚೀನ ಕವಿ. 1480ರ ಸುಮಾರಿಗೆ ಈತ ರಚಿಸಿದ ‘ಕರಿರಾಯ ಚರಿತೆ’ಯೇ ಮೂಡಲಪಾಯದ ಮೊಟ್ಟಮೊದಲ ಕೃತಿಯಾಗಿದೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಪ್ರದರ್ಶನಕ್ಕೆ ಮೂಡಲಪಾಯ ಯಕ್ಷಗಾನ ತಂಡಗಳಿಗೆ ವಿಶೇಷ ಆದ್ಯತೆ ನೀಡಬೇಕು. ಭಾಗವತರು ಮತ್ತು ಕಲಾವಿದರು ಕೂಡ ಇಂದಿನ ಪರಿಸ್ಥಿತಿಗೆ ಹೊಂದಿಕೊಂಡು ರಾತ್ರಿಯಿಡೀ ಮಾಡುವ ಪ್ರದರ್ಶನದ ಬದಲಾಗಿ ಎರಡೂವರೆ ಅಥವಾ ಮೂರು ಘಂಟೆಗೆ ಪ್ರದರ್ಶನ ಸೀಮಿತಗೊಳಿಸಿಕೊಳ್ಳಬೇಕು. ಪ್ರದರ್ಶನದಲ್ಲಿ ಬಳಸುವ ಭಾಷೆಯನ್ನು ಸುಧಾರಿಸಿಕೊಳ್ಳಬೇಕು. ಈಗ ಬಳಸುತ್ತಿರುವ ಅತಿ ಭಾರದ ವಸ್ತ್ರ ಮತ್ತು ಒಡವೆಗಳ ಬದಲು ಅವರ ನಟನೆ ಮತ್ತು ನೃತ್ಯ ಪ್ರದರ್ಶನಕ್ಕೆ ಅನುಕೂಲವಾಗುವಂತೆ ಹಗುರವಾದವುಗಳನ್ನು ಸಿದ್ಧಪಡಿಸಿಕೊಂಡರೆ ಮಾತ್ರೆ ಮೂಡಲಪಾಯ ಯಕ್ಷಗಾನವನ್ನು ಉಳಿಸಲು ಸಾಧ್ಯ. ಕೆ.ಪುಟ್ಟರಂಗಪ್ಪ ವಿಶ್ರಾಂತ ಪ್ರಾಧ್ಯಾಪಕ
ಮೂಡಲಪಾಯ ಯಕ್ಷಗಾನ ಟ್ರಸ್ಟ್ ಮೂಲಕ 35 ವರ್ಷಗಳಿಂದ ಕಲಾವಿದರು ಕಲೆ ಉಳಿಸುತ್ತಿದ್ದಾರೆ. ವಯಸ್ಸಾದ ಕಲಾವಿದರಿಗೆ ಮಾಸಾಶನ ನೀಡುವಲ್ಲಿ ಸರ್ಕಾರಗಳ ವಿಳಂಬ ಧೋರಣೆ ಅನುಸರಿಸುತ್ತಿವೆ. ಕಲಾವಿದರನ್ನು ಗುರುತಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ
ಉಮೇಶ್ ಕಲಾವಿದ
ಕೋನೇಹಳ್ಳಿ ಭಾಗದಲ್ಲಿ ಕಲೆಯನ್ನು ನೋಡುತ್ತಾ ಬಣ್ಣ ಹಚ್ಚುತ್ತಾ ಕುಣಿಯುತ್ತಾ ಆರಾಧಿಸುತ್ತಾ ಬರುತ್ತಿದ್ದೇವೆ. ಇತ್ತೀಚೀನ ದಿನಗಳಲ್ಲಿ ಕಲೆಯನ್ನು ಯಕ್ಷಗಾನ ಮಂದಿರಗಳನ್ನು ಉಳಿಸಲು ಕಲಾ ಪೋಷಕರು ಹಾಗೂ ಸಂಘ ಸಂಸ್ಥೆಗಳ ಸಹಯೋಗ ಅವಶ್ಯಕ
ಶಂಕರಪ್ಪ ಅಂಚೆಕೊಪ್ಪಲು ಖಜಾಂಚಿ ಮೂಡಲಪಾಯ ಯಕ್ಷಗಾನ ಟ್ರಸ್ಟ್