ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಂಗೆ ಭಾನುವಾರ ಆಂಧ್ರದಿಂದ ಕೃಷ್ಣ ನದಿ ನೀರು ಹರಿಯಿತು.

ಆಂಧ್ರ ಪ್ರದೇಶದ ಆಂಧ್ರನಿವಾ ಯೋಜನೆಯಡಿ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸಲು ಅಲ್ಲಿನ ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನ ನಡೆಸಿತ್ತು. ವಾರದ ಹಿಂದೆ ಅನಂತಪುರ ಜಿಲ್ಲೆ ರೊದ್ದಂ ಬಳಿಯ ಪೆದ್ದಕೋಡಪಲ್ಲಿಯಿಂದ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ ನಿರ್ಮಿಸಲಾದ ಕಾಲುವೆಗೆ ನೀರು ಹರಿಸಲಾಗಿತ್ತು.

ಇಂದು ತಾಲ್ಲೂಕಿನ ಗಡಿ ಗ್ರಾಮ ಪೆಂಡ್ಲಿಜೀವಿ ಮೂಲಕ ನಾಗಲಮಡಿಕೆಗೆ ನೀರು ತಲುಪಿತು. ಮೇ 27ರಂದು ನಾಗಲಮಡಿಕೆ ಚೆಕ್ ಡ್ಯಾಂ ತುಂಬಿ ಪೇರೂರು ಡ್ಯಾಂನತ್ತ ನೀರು ಹರಿಯಬಹುದು ಎಂದು ಆಂಧ್ರ ಪ್ರದೇಶ ಸರ್ಕಾರಕ್ಕೆ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಗಡಿಗೆ ನೀರು ಪ್ರವೇಶಿಸಿದ ಕೂಡಲೇ ತಾಲ್ಲೂಕಿನ ಜನರು ಕಾಲುವೆಯೊಳಗೆ ಇಳಿದು ಸಂತಸ ವ್ಯಕ್ತಪಡಿಸಿದರು. ಕೃಷ್ಣ ನದಿ ನೀರನ್ನು ಮೈ ಮೇಲೆ ಎರಚಿಕೊಂಡು ನಮಸ್ಕರಿಸಿದರು. ಕೆಲವರು ಮೀನು ಹಿಡಿದು ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.