ಶಿರಾ: ಕನಕದಾಸರನ್ನು ಕುರುಬ ಜಾತಿಗೆ ಸೀಮಿತಗೊಳಿಸಬಾರದು. ಜಾತಿಯನ್ನು ಮೀರಿ ಬೆಳೆದ ಅವರು ದೇವರು ಇದ್ದಾನೆ ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ವ್ಯಕ್ತಿ. ಅವರ ತತ್ವ ಸಿದ್ಧಾಂತಗಳು ನಮಗೆ ಆದರ್ಶವಾಗಬೇಕು ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ನಗರದ ಮಿನಿವಿಧಾನಸೌಧದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನಕದಾಸರ ತತ್ವಗಳನ್ನು ಆಳವಡಿಸಿ ಕೊಂಡವರು ಜಾತಿ ಹೆಸರು ಹೇಳಬಾರದು. ಜಾತಿ ಹುಟ್ಟಿನಿಂದ ಬರುವುದಿಲ್ಲ. ನಾವು ಮಾಡುವ ಕಸುಬಿನಿಂದ ಬಂದಿದೆ. ಕನಕ ಎಂಬುದು ಅಗಾಧ ಶಕ್ತಿ ಅದಮ್ಯ ಚೇತನ ಅವರು ಭಗವಂತನಿಗೆ ಹತ್ತಿರವಾಗಿದ್ದವರು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾನವ ಜಾತಿ ಒಂದೇ ಎಂದು ಕೀರ್ತನೆಗಳ ಮೂಲಕ ಸಂದೇಶ ನೀಡಿ ಜಾತಿ ಪದ್ಧತಿಯನ್ನು ತೊಲಗಿಸುವ ಕೆಲಸ ಮಾಡಿದರು ಎಂದರು. ನಾರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್ ಕನಕದಾಸರು ಎಲ್ಲಾ ಜಾತಿಯವರು ಸಮಾನರು ಎನ್ನುವ ತತ್ವ ಸಾರಿದರು. ಉಡುಪಿ ಶ್ರೀಕೃಷ್ಣ ಮಠ ಇಂದು ವಿಶ್ವದ ಗಮನ ಸೆಳೆಯಲು ಕನಕದಾಸರ ಭಕ್ತಿಯೇ ಕಾರಣ ಎಂದರು. ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ನಗರಸಭೆ ಪೌರಾಯುಕ್ತ ರುದ್ರೇಶ್ ಅಧ್ಯಕ್ಷ ಜೀಷಾನ್ ಮಹಮೂದ್ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬರಗೂರು ನಟರಾಜು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಶಂಕರ್ ಸದಸ್ಯರಾದ ಎಸ್.ಎಲ್.ರಂಗನಾಥ್ ಅಜೇಯ್ ಕುಮಾರ್ ತೇಜಾ ಭಾನು ಪ್ರಕಾಶ್ ಬಿ.ಎಂ.ರಾಧಾಕೃಷ್ಣ ಧೃವಕುಮಾರ್ ಸುಶೀಲಾ ವಿರೂಪಾಕ್ಷ ರಂಗನಾಥ್ ಎಸ್.ಕೆ.ದಾಸಪ್ಪ ಭಾನುಪ್ರಕಾಶ್ ಬಿಇಒ ಕೃಷ್ಣಪ್ಪ ವಲಯ ಅರಣ್ಯಾಧಿಕಾರಿ ನವನೀತ್ ಕೃಷಿ ಸಹಾಯಕ ನಿರ್ದೇಶಕ ನಾಗರಾಜು ತಾಲ್ಲೂಕು ವೈದ್ಯಾಧಿಕಾರಿ ಸಿದ್ದೇಶ್ವರ್ ಇದ್ದರು.