ತುಮಕೂರು: ಬಿಪಿಎಲ್ ಕಾರ್ಡ್ ರದ್ದುಗೊಳಿಸಿದ ಸರ್ಕಾರದ ನಿರ್ಧಾರ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.

‘ಕೇಂದ್ರ ಸರ್ಕಾರ ಆಧಾರ್, ಪಾನ್ ಕಾರ್ಡ್ ಜೋಡಣೆ ಕಡ್ಡಾಯಗೊಳಿಸಿ ಆದೇಶಿಸಿತ್ತು. ತುಂಬಾ ಜನರಿಗೆ ಇದರ ಅರಿವು ಇರಲಿಲ್ಲ. ಜೋಡಣೆಯ ಅವಧಿ ಮೀರಿದ ನಂತರ ದಂಡ ವಿಧಿಸಲಾಯಿತು. ಜೋಡಣೆಗಾಗಿ ಪಾವತಿಸಿದ ಸಾವಿರಾರು ರೂಪಾಯಿ ಹಣ ಆದಾಯ ತೆರಿಗೆ ಇಲಾಖೆಗೆ ಸಂದಾಯವಾಗಿದೆ. ಇದನ್ನು ಆದಾಯ ಎಂದು ಪರಿಗಣಿಸಲಾಗಿದೆ. ಇದರಿಂದ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯವಾಗುತ್ತಿದೆ’ ಎಂದು ಸಂಘಟನೆಯ ಸಂಚಾಲಕಿ ಟಿ.ಆರ್.ಕಲ್ಪನಾ ಹೇಳಿದರು.

ದಂಡ ಪಾವತಿಸಿದ 1.06 ಲಕ್ಷ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ದೀಪಾವಳಿ ಸಮಯದಲ್ಲಿ ಕಾರ್ಡ್ ರದ್ದುಪಡಿಸಿ ಎಪಿಎಲ್ ಎಂದು ಮಾರ್ಪಾಡು ಮಾಡಲಾಗಿದೆ. ಆಧಾರ್, ಪಾನ್ ಜೋಡಣೆಗೆ ವಿಧಿಸಿದ್ದ ದಂಡವನ್ನು ಆದಾಯ ಎಂದು ಪರಿಗಣಿಸಿದ ಕೇಂದ್ರ ಸರ್ಕಾರದ ನಡೆ ಆಕ್ಷೇಪಾರ್ಹವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಡ್ ರದ್ದಾದವರಲ್ಲಿ ಬಹುತೇಕರು ಕಡು ಬಡತನದಲ್ಲಿದ್ದಾರೆ. ಸಂಬಂಧಪಟ್ಟ ಇಲಾಖೆಯಲ್ಲಿ ವಿಚಾರಿಸಿದರೆ ಆದಾಯ ತೆರಿಗೆ ಇಲಾಖೆಯಿಂದ ತೆರಿಗೆದಾರರಲ್ಲ ಎಂದು ದೃಢೀಕರಣ ತರುವಂತೆ ಹೇಳುತ್ತಿದ್ದಾರೆ. ಇದರಿಂದ ಜನರಿಗೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ರದ್ದಾದ ಕಾರ್ಡ್ ಮತ್ತೆ ಸಕ್ರಿಯಗೊಳಿಸಬೇಕು. ಹೊಸ ಕಾರ್ಡ್ ನೋಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆಯ ಶಹತಾಜ್, ಹಲಿಮಾ, ಇಂತಿಯಾಜ್, ಅನಸೂಯ, ಪಲ್ಲವಿ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.