ತುಮಕೂರು: ನಗರದ ಗಾರ್ಡನ್ ರಸ್ತೆ ಟೂಡಾ ಬಡಾವಣೆಯಲ್ಲಿ ಸೋಮವಾರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, ₹2.50 ಲಕ್ಷ ಮೌಲ್ಯದ 5 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ನಗರದ ಚಿಕ್ಕಪೇಟೆಯ ರಿಹಾನ್ ಪಾಷ (19), ಸಂಜಯ್ (20), ಸಾಗರ್ ಅಲಿಯಾಸ್ ಮಲ್ಲ (20), ಕೆ.ಕಿರಣ್‌ಕುಮಾರ್ ಅಲಿಯಾಸ್ ಕುಳ್ಳ (21) ಬಂಧಿತರು. ‘ಕೈಯಲ್ಲಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದು ಓಡಾಡುತ್ತಿದ್ದಾರೆ’ ಎಂಬ ಖಚಿತ ಮಾಹಿತಿ ಮೇರೆಗೆ ಸೈಬರ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿಗಳನ್ನು ವಿಚಾರಿಸಿದಾಗ ಗಾಂಜಾವನ್ನು ಪರಸ್ಪರ ಹಂಚಿಕೊಂಡು ಮಾರಾಟ ಮಾಡಲು ಯೋಜನೆ ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಕೂಡಲೇ ನಾಲ್ವರನ್ನು ಬಂಧಿಸಿದ್ದಾರೆ.

ಸೈಬರ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಎಚ್.ರಾಮಕೃಷ್ಣಯ್ಯ, ಸಬ್ ಇನ್‌ಸ್ಪೆಕ್ಟರ್ ಶಮೀನ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.