ತುಮಕೂರು:ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿಪುಷ್ಪಾಲಂಕೃತ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಭಕ್ತರ ಗಮನ ಸೆಳೆಯುತ್ತಿದೆ.

ಸಮಾಧಿ ಮಂಟಪ ಸೇರಿದಂತೆ ಮಠದ ಆವರಣ ಪುಷ್ಪಾಲಂಕೃತವಾಗಿದೆ.

ವಿವಿಧ ಮಠಾಧೀಶರು, ವಿಧಾನ ಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಗೃಹ ಸಚಿವ ಎಂ.ಬಿ.ಪಾಟೀಲ ಸೇರಿದಂತೆ ಹಲವು ಗಣ್ಯರಿಂದ ಗದ್ದುಗೆ ದರ್ಶನ.

ಇದನ್ನೂ ಓದಿ:ಸಿದ್ಧಗಂಗಾ ಮಠಕ್ಕೆ ನೊಬೆಲ್ –ತಜ್ಞರ ಜೊತೆ ಸಮಾಲೋಚನೆ

ಪುಣ್ಯಸ್ಮರಣೆ ನೆಪದಲ್ಲಿ ಜೊತೆಯಾದರು: ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ಅಕ್ಕಪಕ್ಕ ಕೂತು ಎಲ್ಲರ ಗಮನ ಸೆಳೆದರು.

ವೀರಶೈವ ಮತ್ತು ಲಿಂಗಾಯತ 'ಧರ್ಮ' ವಿವಾದದಿಂದ ಇಬ್ಬರೂವಿರುದ್ಧ ದಿಕ್ಕಿನಲ್ಲಿ ಮುಖಮಾಡಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಕರಪ್ಪ ಮತ್ತು ಜಾಗತೀಕ ಲಿಂಗಾಯತ ಮಹಾ ಸಭಾ ಪ್ರಮುಖರಾಗಿರುವ ಪಾಟೀಲ್. ವೇದಿಕೆಗೆ ಬಂದ ಶಾಮನೂರು ಪಾಟೀಲರ ಪಕ್ಕ ಕುಳಿತರು. ಸ್ವಲ್ಪ ಹೊತ್ತು ಪರಸ್ಪರ ಮುಖ ನೋಡಲಿಲ್ಲ. ನಂತರ ಇಬ್ಬರೂ ಮಾತನಾಡಿಕೊಂಡು ನಕ್ಕರು. ಆ ಸಂಭಾಷಣೆ ಆಗಾಗ್ಗೆ ಮುಂದುವರಿಯಿತು.

ಇದನ್ನೂ ಓದಿ:ಕೇಂದ್ರದಲ್ಲಿ ನಮಗೆ ಅಧಿಕಾರ ಸಿಕ್ಕರೆ ಸ್ವಾಮೀಜಿಗೆ ‘ಭಾರತರತ್ನ

ಶಿವಕುಮಾರ ಸ್ವಾಮೀಜಿ ಈ ಹಿಂದೆ ಮಾಡಿದ್ದ ಭಾಷಣವನ್ನು ಎಲ್ಇಡಿ ಪರದೆಯ ಮೇಲೆ ಬಿತ್ತರಿಸಲಾಯಿತು. ಕಾಯಕ, ಪ್ರಸಾದ ಮತ್ತು ಶಿಕ್ಷಣದ ಮಹತ್ವ ಸಾರುವ ಈ ಮಾತುಗಳು ಸ್ವಾಮೀಜಿ ಅವರು ಶಿವೈಕ್ಯರಾದ ದಿನ ಸಾಮಾಜಿಕ ಜಾಲತಾಣದ ಲ್ಲಿ ಹೆಚ್ಚು ಹರಿದಾಡಿತ್ತು.

ಗಮನ ಸೆಳೆಯುತ್ತಿವೆ ಶಿವಕುಮಾರ ಸ್ವಾಮೀಜಿ ಚಿತ್ರಗಳು

ಇದನ್ನೂ ಓದಿ: ‘ನನಗೂ ಸಿದ್ದರಾಮಯ್ಯಗೂ ಪುಸ್ತಕ ಕೊಟ್ಟು ಓದಿಸಿದ್ದರು ಸ್ವಾಮೀಜಿ’

ಕಾರ್ಯಕ್ರಮ ನಡೆಯುತ್ತಿರುವ ಗೋಸಲ ಸಿದ್ಧೇಶ್ವರರ ವೇದಿಕೆಯಲ್ಲಿ ಎಲ್ಇಡಿ ಪರದೆ ಅಳವಡಿಸಲಾಗಿದೆ. ಒಂದು ಬದಿಯಲ್ಲಿ ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ ಬದುಕು ಸಾಧನೆ ಹೀಗೆ ಅವರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲುವ ಚಿತ್ರಗಳು ಪ್ರದರ್ಶನವಾಗುತ್ತಿವೆ. ಪರದೆಯ ಚಿತ್ರಗಳನ್ನು ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.