ಕುಣಿಗಲ್: ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ರಾತ್ರಿ ₹1.50 ಲಕ್ಷ ಮೌಲ್ಯದ ಸಾಮಗ್ರಿ ಕಳ್ಳತನವಾಗಿದೆ.

ಗ್ರಾಮಪಂಚಾಯಿತಿ ಕಚೇರಿ ಹಿಂಬದಿಯ ಕಿಟಕಿಗಳ ಸರಳುಗಳನ್ನು ಕತ್ತರಿಸಿ ಒಳ ಪ್ರವೇಶಿಸಿದ ಕಳ್ಳರು, ನಾಲ್ಕು ಯುಪಿಎಸ್ ಸೆಟ್ ಮತ್ತು ಬ್ಯಾಟರಿ, ಗ್ರಂಥಾಲಯ ಬಳಕೆಗಾಗಿ ತಂದಿದ್ದ ಟಿವಿ, ಪ್ರೊಜೆಕ್ಟರ್, ಡಿವಿಆರ್ ಮತ್ತು 120 ಬಲ್ಬ್ಗಳನ್ನು ಕಳ್ಳತನ ಮಾಡಿದ್ದಾರೆ.

ನಂತರ ಸಮೀಪದ ಸರ್ಕಾರಿ ಶಾಲೆಯ ಕಂಪ್ಯೂಟರ್ ಕೊಠಡಿಯ ಬಾಗಿಲು ಜಖಂಗೊಳಿಸಿ ಬ್ಯಾಟರಿ ಸೆಟ್, ಕಂಪ್ಯೂಟರ್ ಕಳವು ಮಾಡಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ್ ಭೇಟಿ ನೀಡಿ ಪರಿಶೀಲಿಸಿ ನೀಡಿದ ಸೂಚನೆ ಮೇರೆಗೆ ಕುಣಿಗಲ್ ಪೊಲೀಸರಿಗೆ ದೂರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.