ಪಾವಗಡ: ಪಟ್ಟಣದ ಹಿಂದೂಪುರ ರಸ್ತೆ ಗೃಹ ನಿರ್ಮಾಣ ಮಂಡಳಿ ಬಳಿ ಭಾನುವಾರ ರಾತ್ರಿ ಎರಡು ವರ್ಷದ ಚಿರತೆಯೊಂದು ಬೋನಿಗೆ ಬಿದ್ದಿದೆ.

ಈ ಪ್ರದೇಶದಲ್ಲಿ ಚಿರತೆಯು ದಾಳಿ ಮಾಡಿ ನಾಯಿಗಳನ್ನು ಹೊತ್ತೊಯ್ಯುತ್ತಿತ್ತು. ಮೆನಗಳ ಬಳಿ ಓಡಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರು ನೀಡಿದ್ದರು.

ಕಳೆದ ಎರಡು ತಿಂಗಳಿಂದ ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಭಾನುವಾರ ರಾತ್ರಿ ಚಿರತೆ ಬೋನಿಗೆ ಬಿದ್ದ ಕೂಡಲೇ, ಚಿರತೆ ನೋಡಲು ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಭೇಟಿ ನೀಡಿದರು.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚಿರತೆಯನ್ನು ರಾತ್ರಿಯೇ ಬೇರೆಡೆಗೆ ಸ್ಥಳಾಂತರಿಸಿದರು.

ವಲಯ ಅರಣ್ಯ ಇಲಾಖೆ ಆರ್ಎಫ್ಒ ರಾಕೇಶ್, ಡಿಆರ್ಎಫ್ಒ ಬಸವರಾಜು, ಅರಣ್ಯ ರಕ್ಷಕ ಹಸನ್ ಬಾಷಾ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.