ತುಮಕೂರು: ಪದವಿ ಫಲಿತಾಂಶ ಪ್ರಕಟಿಸಿ (6ನೇ ಸೆಮಿಸ್ಟರ್) ಹಲವು ತಿಂಗಳೇ ಕಳೆದಿದ್ದರೂ ತುಮಕೂರು ವಿಶ್ವವಿದ್ಯಾಲಯ ಈವರೆಗೂ ಅಂಕಪಟ್ಟಿ ನೀಡದೆ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದೆ ಕೈಚಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ಕಾಲೇಜು, ವಿಶ್ವವಿದ್ಯಾಲಯಕ್ಕೆ ಅಲೆದು–ಅಲೆದು ಸುಸ್ತಾಗಿದ್ದಾರೆ. ನಾಳೆ, ನಾಡಿದ್ದು, ಮುಂದಿನ ವಾರ ಎಂದು ಸಬೂಬು ಹೇಳಿ ಕಳುಹಿಸಲಾಗುತ್ತಿದೆ. ನಮಗೂ ಸಾಕಾಗಿ ಹೋಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

ವಿ.ವಿ ಘಟಿಕೋತ್ಸವ 2023 ಆಗಸ್ಟ್ನಲ್ಲಿ ನೆರವೇರಿತು. ಇದಕ್ಕೂ ಮುನ್ನ ಫಲಿತಾಂಶ ಪ್ರಕಟಿಸುವುದು ವಾಡಿಕೆ. ಘಟಿಕೋತ್ಸವ ಮುಗಿದರೂ ಕಲೆ, ವಿಜ್ಞಾನ, ವಾಣಿಜ್ಯ ಪದವಿಯ ಕೆಲವು ಸೆಮಿಸ್ಟರ್ಗಳ ಫಲಿತಾಂಶ ಪ್ರಕಟವಾಗಿರಲಿಲ್ಲ. ಘಟಿಕೋತ್ಸವದ ನಂತರವೂ ಕೆಲವು ವಿಭಾಗಗಳ ಫಲಿತಾಂಶ ಪ್ರಕಟಿಸಲಾಯಿತು. ಆಗಸ್ಟ್– ಸೆಪ್ಟೆಂಬರ್ನಲ್ಲಿ ಪರೀಕ್ಷೆ ನಡೆದು ನಂತರ ಫಲಿತಾಂಶ ಹೊರ ಬಂದಿದ್ದು, ಅಲ್ಲಿಂದ ಈವರೆಗೂ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನೇ ನೀಡಿಲ್ಲ.

ಪದವಿ ಮುಗಿದ ನಂತರ ವಿಶ್ವವಿದ್ಯಾಲಯದಲ್ಲೇ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದವರಿಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಪದವಿ ನಂತರ ವಿ.ವಿ ಹೊರಗಿನ ಕಾಲೇಜುಗಳು, ಸ್ನಾತಕೋತ್ತರ ಪದವಿ, ಕಾನೂನು ಪದವಿ, ಇತರೆ ಕೋರ್ಸ್ಗಳು ಹಾಗೂ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆದವರು ಪ್ರಮುಖವಾಗಿ ಸಮಸ್ಯೆ ಎದುರಿಸುತ್ತಿದ್ದಾರೆ. ವಿ.ವಿ ನೀಡುವ ‘ಪ್ರಾವಿಜನಲ್ ಸರ್ಟಿಫಿಕೇಟ್’ ಕೊಟ್ಟು ಪ್ರವೇಶ ಪಡೆದುಕೊಂಡಿರುತ್ತಾರೆ. ಅದರ ಆಧಾರದ ಮೇಲೆ ದಾಖಲಾತಿ ಸಿಕ್ಕಿರುತ್ತದೆ.

ಕೊನೆಯ ಹಂತದಲ್ಲಿ ಪ್ರವೇಶ ಖಚಿತಪಡಿಸಲು ನಿಗದಿತ ಗಡುವಿನ ಒಳಗೆ ಮೂಲ ಅಂಕಪಟ್ಟಿಯನ್ನು ಸಂಬಂಧಿಸಿದ ಕಾಲೇಜಿಗೆ ನೀಡಬೇಕಾಗುತ್ತದೆ. ಮೂಲ ಅಂಕಪಟ್ಟಿ ಪರಿಶೀಲಿಸಿದ ನಂತರ ದಾಖಲಾತಿಯನ್ನು ಖಚಿತಪಡಿಸಲಾಗುತ್ತದೆ. ಮೂಲ ಅಂಕಪಟ್ಟಿ ಕೊಡದಿದ್ದರೆ ಪ್ರವೇಶವನ್ನು ರದ್ದುಪಡಿಸಲಾಗುತ್ತದೆ. ಈಗ ಇಂತಹದ್ದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದು, ಮೂಲ ಅಂಕಪಟ್ಟಿ ನೀಡಲು ಸಾಧ್ಯವಾಗದೆ ಪ್ರವೇಶ ರದ್ದುಗೊಳ್ಳುವ ಹಂತಕ್ಕೆ ಬಂದಿದೆ. ಇನ್ನೂ ಕೆಲವು ದಿನಗಳಲ್ಲಿ ಅಂಕಪಟ್ಟಿ ನೀಡದಿದ್ದರೆ ಪ್ರವೇಶ ರದ್ದುಗೊಂಡು, ಮತ್ತೆ ಒಂದು ವರ್ಷ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

ಹಿಂದಿನ ವರ್ಷವೂ ಫಲಿತಾಂಶ ಪ್ರಕಟಿಸುವುದು ಹಾಗೂ ಅಂಕಪಟ್ಟಿ ನೀಡುವುದು ತಡವಾಗಿತ್ತು. ಈ ವರ್ಷವೂ ಅದೇ ಪರಿಸ್ಥಿತಿ ಮುಂದುವರಿದಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಅಲೆದು ಸಾಕಾಗಿದೆ’

‘ನಾನು ಓದಿದ ಕಾಲೇಜಿನಲ್ಲಿ (ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸರ್ಕಾರಿ ಪದವಿ ಕಾಲೇಜು) ಅಂಕಪಟ್ಟಿ ಕೇಳಿದರೆ ವಿಶ್ವವಿದ್ಯಾಲಯದಿಂದ ಬಂದಿಲ್ಲ. ಅಲ್ಲಿಯೇ ಹೋಗಿ ಕೇಳಿ ಎಂದು ಹೇಳುತ್ತಾರೆ. ವಿ.ವಿಯಲ್ಲಿ ಕೇಳಿದರೆ ಇನ್ನೂ ಕೆಲವೇ ದಿನಗಳಲ್ಲಿ ಕೊಡಲಾಗುವುದು. ಅಂಕಪಟ್ಟಿ ಮುದ್ರಣವಾಗುವುದು ತಡವಾಗಿದೆ ಎಂದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಕಾಲೇಜು ವಿಶ್ವವಿದ್ಯಾಲಯ ಸುತ್ತುವುದೇ ಆಗಿದೆ. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕಾಲೇಜಿನಲ್ಲಿ ಅಂಕಪಟ್ಟಿ ಕೊಡದಿದ್ದರೆ ಪ್ರವೇಶ ರದ್ದುಪಡಿಸುವುದಾಗಿ ಹೇಳುತ್ತಿದ್ದಾರೆ. ಇನ್ನೂ ತಡವಾದರೆ ಪ್ರವೇಶ ಸಿಗದೆ ಮನೆಯಲ್ಲೇ ಕುಳಿತುಕೊಳ್ಳಬೇಕಾಗುತ್ತದೆ’ ಎಂದು ವಿದ್ಯಾರ್ಥಿನಿಯೊಬ್ಬರು ಅಳಲು ತೋಡಿಕೊಂಡರು.

'ಹಂತಹಂತವಾಗಿ ವಿತರಣೆ’

ಪದವಿ ಅಂಕಪಟ್ಟಿಗಳನ್ನು ಮುದ್ರಿಸಿ ಹಂತಹಂತವಾಗಿ ಕಾಲೇಜುಗಳಿಗೆ ಕಳುಹಿಸಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಸಿಗಲಿದೆ. ತೀರ ಅಗತ್ಯ ಇದ್ದವರು ವಿ.ವಿಗೆ ಬಂದರೆ ಕೊಡಲಾಗುತ್ತದೆ – ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ

‘ಅಂಕಪಟ್ಟಿ ಕೊಡುತ್ತೇವೆ’

ಅಂತಿಮ ಪದವಿ (6ನೇ ಸೆಮಿಸ್ಟರ್) ಮುಗಿಸಿ ಹೊರಗೆ ಹೋಗಿರುವ ಅಭ್ಯರ್ಥಿಗಳಿಗೆ ಅಂಕಪಟ್ಟಿಯನ್ನು ಕೊಡುವ ಪ್ರಕ್ರಿಯೆ ಆರಂಭವಾಗಿದೆ. ಇನ್ನೂ ಕೆಲವು ಮುದ್ರಣವಾಗುತ್ತಿವೆ. ಶೀಘ್ರವೇ ವಿತರಣೆ ಮಾಡಲಾಗುವುದು – ಪ್ರೊ.ಕೆ.ಪ್ರಸನ್ನಕುಮಾರ್ ಕುಲಸಚಿವ (ಮೌಲ್ಯಮಾಪನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.