ತುಮಕೂರು: ಶಿಕ್ಷಕರು ಕೇವಲ ಪಠ್ಯಕ್ರಮ ನವೀಕರಿಸುವುದಷ್ಟೇ ಅಲ್ಲ, ವಿನೂತನ ಪ್ರವೃತ್ತಿಗಳಿಗೆ ಉನ್ನತೀಕರಣಗೊಳ್ಳಬೇಕು ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸಲಹೆ ಮಾಡಿದರು.

ವಿಶ್ವವಿದ್ಯಾಲಯದಲ್ಲಿ ಶನಿವಾರ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಪದವಿಯ ಅಂತಿಮ ವರ್ಷದ ಬಿಕಾಂ ಪಠ್ಯಕ್ರಮ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳ ಒಳಿತಿಗಾಗಿ ಶಿಕ್ಷಣ ನೀತಿಗಳಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಪ್ರಚಲಿತ ವಿಷಯಗಳನ್ನು ಕಲಿಯಬೇಕು. ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಜ್ಞಾನ ಅಳೆದು ಗೌರವಿಸುತ್ತಾರೆ. ಹಾಗಾಗಿ ಹೊಸತನ್ನು ಕಲಿಯುವ ಹಂಬಲ, ಗುಣ ಮೊದಲು ಶಿಕ್ಷಕರಲ್ಲಿ ಪ್ರವೃತ್ತಿಯಾಗಬೇಕು ಎಂದರು.

ವಿ.ವಿ ಕುಲಸಚಿವೆ ನಾಹಿದಾ ಜಮ್ ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಪ್ರಸನ್ನಕುಮಾರ್, ಪ್ರಾಧ್ಯಾಪಕರಾದ ಪಿ.ಪರಮಶಿವಯ್ಯ, ಜಿ.ಸುದರ್ಶನ ರೆಡ್ಡಿ, ಪ್ರೊ.ಬಿ.ಶೇಖರ್, ವಾಣಿಜ್ಯ ಮತ್ತು ನಿರ್ವಹಣಾ ಶಿಕ್ಷಕರ ಕಲ್ಯಾಣ ವೇದಿಕೆ ಅಧ್ಯಕ್ಷ ಟಿ.ಎನ್.ನರಸಿಂಹಮೂರ್ತಿ, ಕಾರ್ಯದರ್ಶಿ ಸಿ.ದಿನೇಶ್‌ಕುಮಾರ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.