ಕುಂದಾಪುರ: ಇಲ್ಲಿನ ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಶಿಕ್ಷಣ ಸಂಸ್ಥೆಯಾದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿಗೆ ಯುಜಿಸಿ ನ್ಯಾಕ್ ಸಂಸ್ಥೆಯು ಬಿ++ ಗ್ರೇಡ್ ಮಾನ್ಯತೆ ನೀಡಿದೆ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೊತ್ತಾಡಿ ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

ಹೊಸ ಮಾನ್ಯತಾ ಕ್ರಮದಲ್ಲಿ ಸಿಜಿಪಿಎ 2.92/4 ಸಂಸ್ಥೆ ಪಡೆದಿದ್ದು, ಮಂಗಳೂರು ವಿ.ವಿ. ವ್ಯಾಪ್ತಿಗೆ ಒಳಪಟ್ಟಿರುವ ಅನುದಾನ ರಹಿತ ಶಿಕ್ಷಣ ಸಂಸ್ಥೆಯೊಂದು ಸ್ಥಾಪನೆಯಾದ ಕೇವಲ 11 ವರ್ಷಗಳಲ್ಲಿ ಮಾಡಿದ ಸಾಧನೆಗೆ ಮೊಟ್ಟ ಮೊದಲ ಬಾರಿಗೆ ಬಿ++ ಗ್ರೇಡ್ ಮಾನ್ಯತೆ ಬಂದಿರುವುದು ವಿಶೇಷ. ಹನ್ನೊಂದು ವರ್ಷಗಳ ಹಿಂದೆ ಕೇವಲ 130 ವಿದ್ಯಾರ್ಥಿಗಳೊಂದಿಗೆ ಆರಂಭಗೊಂಡ ಸಂಸ್ಥೆಯಲ್ಲಿ ಪ್ರಸ್ತುತ 1,400 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

ಬಿ.ಕಾಂ ಪಠ್ಯ ಕ್ರಮದಲ್ಲಿ ನಾಲ್ಕು ವಿಭಾಗಗಳು, ಬಿ.ಕಾಂ.ನೊಂದಿಗೆ ಸಿಎ/ಸಿಎಸ್, ಬಿಸಿಎಯಲ್ಲಿ ಎರಡು ಹಾಗೂ ಬಿ.ಬಿ.ಎ. ಮತ್ತು ಬಿ.ಎಸ್‌ಸಿಯಲ್ಲಿ ಒಂದು ವಿಭಾಗವಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ (ಐಬಿಪಿಎಸ್) ತರಬೇತಿ, ಸರ್ಟಿಫಿಕೇಟ್ ಕೋರ್ಸ್‌ಗಳು, ವಿದ್ಯಾರ್ಥಿಗಳ ವಿವಿಧ ಅಭಿರುಚಿಗೆ ತಕ್ಕಂತೆ 20 ವಿವಿಧ ವೇದಿಕೆಗಳು, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ಮತ್ತು 1,500 ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಭಾಂಗಣ, ಪೋಷಕ-ಶಿಕ್ಷಕರ ನಿರಂತರ ಸಂಪರ್ಕ, ಚರ್ಚೆ ಮತ್ತು ಪೋಷಕರ ಸಲಹೆಗಳಿಗೆ ಸ್ಪಂದನೆ, ಹೆಮ್ಮೆಯ ಪ್ರಾಕ್ತನ ವಿದ್ಯಾರ್ಥಿ ಸಂಘ ಹೀಗೆ ಬಹುಬಗೆಯ ಕಾರ್ಯಚಟುವಟಿಕೆಗಳಲ್ಲಿ ಸಂಸ್ಥೆ ಗುರುತಿಸಿಕೊಂಡಿದೆ ಎಂದು ಉಮೇಶ್ ಶೆಟ್ಟಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.