ಉಡುಪಿ: ಕಜಕಿಸ್ತಾನದ ಪ್ರಜೆ ಸುಲ್ತಾನೆಟ್ ಬೆಕ್ಟೆನೋವಾ (51) ಎಂಬುವವರ ಅಂತ್ಯಸಂಸ್ಕಾರ ಉಡುಪಿಯ ಸಿ.ಎಸ್.ಐ ಚರ್ಚ್ನ ದಫನ ಭೂಮಿಯಲ್ಲಿ ಸಭಾಪಾಲಕ ರೆ. ಜೋಸ್ ಬೆನೆಡಿಕ್ಟ್ ಅಮ್ಮನ್ನ ನೇತೃತ್ವದಲ್ಲಿ ನೆರವೇರಿತು.

ಮಹಿಳೆ ಮೃತಪಟ್ಟು 35 ದಿನಗಳ ಬಳಿಕ ಅಂತ್ಯ ಸಂಸ್ಕಾರ ನೆರವೇರಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನ, ನಗರ ಪೊಲೀಸ್ ಠಾಣೆ ಎಸ್ಐ ಪುನೀತ್ ಕುಮಾರ್, ತನಿಖಾ ಸಹಾಯಕಿ ಸುಷ್ಮಾ, ಠಾಣೆಯ ಸಿಬ್ಬಂದಿ ಉನ್ನತ ಮಟ್ಟದ ಕಾನೂನು ಪ್ರಕ್ರಿಯೆ ನಡೆಸಿದ್ದರು.

ವಿಶ್ರಾಂತ ಸಭಾಪಾಲಕ ರೆ. ಐಸನ್ ಸುಕುಮಾರ ಪಾಲನ್ನ, ಪಾಸ್ಟರ್ ಅಬ್ರಹಾಂ, ಪಾಸ್ಟರ್ ಜೋಯ್ಸ್ ಕುರಿಯ ಕೋನ್, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಉಡುಪಿ ಚರ್ಚ್ನ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ ನಿವಾಸಿ ದಿ.ಕುಲಿನ್ ಮಹೇಂದ್ರ ಷಾ, ಅವರೊಂದಿಗೆ ಕಜಕಿಸ್ತಾನದ ಸುಲ್ತಾನೆಟ್ ಬೆಕ್ಟೆನೋವಾ ಅವರ ವಿವಾಹ 2009ರಲ್ಲಿ ಮಣಿಪಾಲದ ಸಿ.ಎನ್.ಐ ಚರ್ಚ್ನಲ್ಲಿ ನಡೆದಿತ್ತು. ಸುಲ್ತಾನೆಟ್ ಅವರು ಉಡುಪಿಯ ಪುತ್ತೂರಿನಲ್ಲಿ ಬಾಡಿಗೆ ಮನೆ ಮಾಡಿಕೊಂಡು 13 ವರ್ಷದ ಮಗಳು ರೆಬೆಕಾ ಕುಲಿನ್ ಷಾ ಅವರೊಂದಿಗೆ ವಾಸವಾಗಿದ್ದರು.

ಮೇ 7ರಂದು ಸುಲ್ತಾನೆಟ್ ಅವರು ಸ್ನಾನದ ಕೋಣೆಯಲ್ಲಿ ಕುಸಿದುಬಿದ್ದು, ಮೃತಪಟ್ಟಿದ್ದರು. ಮೃತದೇಹವನ್ನು ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಮಹಿಳೆಯ ವಾರಸುದಾರರ ಪತ್ತೆ ಕಾರ್ಯ ನಗರ ಠಾಣೆಯ ಪೊಲೀಸರು ಭಾರತದ ರಾಯಭಾರಿ ಕಚೇರಿ ಸಹಕಾರದಿಂದ ನಡೆಸಿದ್ದರು. ಸುಲ್ತಾನೆಟ್ ಅವರ ಮಗನಿಗೆ ಮೃತದೇಹ ಪಡೆಯಲು ಭಾರತಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕೆ ಉಡುಪಿಯಲ್ಲೇ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.