ಹೆಬ್ರಿ: ‘ಸಾರ್ವಜನಿಕರು ಸಕ್ರಿಯವಾಗಿ ಸಭೆಯಲ್ಲಿ ಪಾಲ್ಗೊಂಡಾಗ ಮಾತ್ರ ಎಲ್ಲ ಮಾಹಿತಿ ತಿಳಿಯುತ್ತದೆ. ಸರ್ಕಾರದ ಯೋಜನೆಗಳು ಯಶಸ್ವಿಯಾಗಿ ಜಾರಿಗೊಳ್ಳುತ್ತದೆ’ ಎಂದು ಕಾರ್ಕಳ ಕ್ಷೇತ್ರ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ್ ಹೇಳಿದರು.

ಕುಚ್ಚೂರು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ನಡೆದ ಗ್ರಾಮ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಅವರು ಮಾತನಾಡಿದರು.

‘ದೇವಳಬೈಲು ಪರಿಸರದಿಂದ ಹೆಗ್ಡೆಬೆಟ್ಟು, ಜಾರ್ ಮಕ್ಕಿ, ಬಡಾಗುಡ್ಡೆ, ಕುಡಿಬೈಲು ತೋಡುಗಳ ಹೂಳೆತ್ತುವ ಕೆಲಸವನ್ನು ಸೀತಾನದಿವರೆಗೆ ಮಾಡಬೇಕು. ಮಳೆಗಾಲದಲ್ಲಿ ಇದರಿಂದ ನಿರಂತರವಾಗಿ ಸಮಸ್ಯೆ ಆಗುತ್ತಿದೆ’ ಎಂದು ಕೃಷಿಕ ಕಾಳು ಶೆಟ್ಟಿ ಹೇಳಿದರು.

ಹಾಲಿಕೊಡ್ಲು ಹಾಗೂ ಸಳ್ಳೆ ಕಟ್ಟೆ ಸಂಪರ್ಕಿಸುವ ರಸ್ತೆ ದುರಸ್ತಿ ಪಡಿಸಬೇಕಾಗಿದೆ. ಬ್ರಿಟಿಷ್ ಕಾಲದ ರಸ್ತೆ ಇದಾಗಿದ್ದು, ಹತ್ತಾರು ಬಾರಿ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ಸಮಯದಲ್ಲಿ ಆಶ್ವಾಸನೆ ಹೊರತು, ರಸ್ತೆ ನಿರ್ಮಾಣ ಆಗಿಲ್ಲ. ಇದರಿಂದ ಮಕ್ಕಳಿಗೆ, ವೃದ್ಧರಿಗೆ, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಶೀಘ್ರ ರಸ್ತೆ ಡಾಂಬರೀಕರಣ ಮಾಡಿಸಿ’ ಎಂದು ದೀಕ್ಷಿತ್ ನಾಯಕ್ ಹೇಳಿದರು.

ಬೇಳಂಜೆಯಿಂದ ಅಲ್ಬಾಡಿ ತನಕ ಅನೇಕ ಮರಗಳು ರಸ್ತೆ ಮೇಲೆ ವಾಲಿಕೊಂಡಿವೆ. ಈ ಬಾರಿ ಮಳೆಗಾಲದಲ್ಲಿ ಹತ್ತಾರು ಮರಗಳು ಧರೆಗುರುಳಿವೆ. ವಾಹನ ಸಂಚರಿಸುವಾಗ ಮರ ಬಿದ್ದು ಸಮಸ್ಯೆ ಆಗಿತ್ತು. ಶೀಘ್ರ ಅಪಾಯಕಾರಿ ಮರಗಳನ್ನು ತೆರವುಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದರು.

ರೈತರ ಗದ್ದೆ, ತೋಟಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಮಂಗಗಳು ಹಿಂಡು ಹಿಂಡಾಗಿ ಬರುತ್ತವೆ. ಅರಣ್ಯ ಇಲಾಖೆಯವರು ಸಸಿಗಳು ನೆಡುವಾಗ ಹೆಚ್ಚಾಗಿ ಹಣ್ಣು ನೀಡುವ ಮರಗಳನ್ನು ನೀಡಬೇಕೆ ಹೊರತು ಅಕೇಶಿಯ ನೆಡಬೇಡಿ ಎಂದು ಅರಣ್ಯ ಅಧಿಕಾರಿಗಳನ್ನು ಗ್ರಾಮಸ್ಥರು ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಬಡ್ತನಬೈಲು ಸೀತಾನದಿ ಸೇತುವೆ ಬಳಿ ಸಾರ್ವಜನಿಕರು ಕಸ ತಂದು ಎಸೆಯುತ್ತಿದ್ದಾರೆ. ಈ ಕುರಿತು ಪ್ರತಿ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದರು ಯಾವುದೇ ಕ್ರಮವಾಗಿಲ್ಲ. ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.
ಭಾಸ್ಕರ ಶೆಟ್ಟಿ, ಸ್ಥಳೀಯ

ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಂಪಿಗೆ ಕೆರೆಯ ಹೂಳು ತೆಗೆಯಲು ಅರಣ್ಯ ಇಲಾಖೆಯವರು ಅನುಮತಿ ನೀಡಬೇಕು. ಇದರಿಂದ ಸ್ಥಳೀಯವಾಗಿ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಅರಣ್ಯ ಇಲಾಖೆಯವರು ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದು ಸಾರ್ವಜನಿಕರು ಆಗ್ರಹಿಸಿದರು.

‘ಕಸ್ತೂರಿರಂಗನ್ ವರದಿ ಬಗ್ಗೆ ಅಧಿಕಾರಿಗಳು ಜನರಿಗೆ ಸೂಕ್ತ ಮಾಹಿತಿ ನೀಡಬೇಕು. ಈಗಾಗಲೇ ತೆರವುಗೊಳಿಸುವ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಊರಿನ ಜನರು ಭಯಭೀತರಾಗಿದ್ದಾರೆ. ಬಹುತೇಕರು ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವವರಿಗೆ ಇದು ತೊಂದರೆ ಆಗಿದೆ. ಜನರನ್ನು ದಿಕ್ಕು ತಪ್ಪಿಸುವ ಕೆಲಸ ಆಗಬಾರದು’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ ಶೆಟ್ಟಿ ಹೇಳಿದರು.

ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಹೊತ್ತಿನಲ್ಲಿ ಸೇವೆ ಆರಂಭವಾಗಿದೆ. ಡಯಾಲಿಸಿಸ್ ಘಟಕ ಆರಂಭಗೊಂಡು ಎಲ್ಲರಿಗೂ ಉಚಿತ ಸೇವೆ ಸಿಗುತ್ತದೆ ಎಂದು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ಬೈಲೂರು ಹೇಳಿದರು.

ಸ್ಥಳೀಯರಾದ ಕಾಳು ಶೆಟ್ಟಿ, ಭಾಸ್ಕರ ಶೆಟ್ಟಿ, ಸುಜಾತ, ಸನ್ನಿ ಜೋಸೆಫ್ ಸಲಹೆ ಸೂಚನೆ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಸದಸ್ಯರಾದ ಮಹೇಶ್ ಶೆಟ್ಟಿ ಕಾನ್ಬೆಟ್ಟು, ಸತೀಶ್ ಪೂಜಾರಿ, ರಾಘವೇಂದ್ರ ಪೂಜಾರಿ, ಸತೀಶ್ ನಾಯ್ಕ, ಸುಕನ್ಯ ಕೃಷ್ಣಮೂರ್ತಿ, ರೇವತಿ ಶೆಟ್ಟಿ, ಶಕುಂತಲಾ, ಸುಜಾತ ಶೆಟ್ಟಿ, ಮಾಲಿನಿ ಇದ್ದರು. ಪಿಡಿಒ ರಿತೇಶ್ ಪುತ್ರನ್ ನಿರೂಪಿಸಿ, ವಂದಿಸಿದರು. ಮಹೇಶ್ ಶೆಟ್ಟಿ ಬಾದ್ಲು ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.