ಹಡಿಲು ಬಿಟ್ಟಿದ್ದ ಗದ್ದೆಯಲ್ಲಿ ನಾವು ಕೃಷಿ ಮಾಡಿದಾಗ ಕೆಲವು ರೈತರು ಸುಗ್ಗಿ ಬೆಳೆ ನಾವು ಮಾಡುತ್ತೇವೆ ಎಂದು ಮುಂದೆ ಬಂದಿದ್ದಾರೆ. ಸಂಘದ ಪ್ರೇರಣೆಯಿಂದ ರೈತರು ಉತ್ಸುಕರಾಗಿ ಮುಂದೆ ಬಂದಿರುವುದು ನಮ್ಮ ಕೆಲಸದ ಬಗ್ಗೆ ಹೆಮ್ಮೆಯಾಗುತ್ತದೆ
ದೀಕ್ಷಿತ್ ನಾಯಕ್ ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ
‘ಕೃಷಿ ಉಳಿವು–ದೇಶ ಸೇವೆ’
ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿ ಬಿಟ್ಟು ಬೇರೆಡೆ ಮುಖ ಮಾಡಿರುವುದು ವಿಷಾದನೀಯ. ಕೃಷಿಯಿಂದ ಸ್ವಾಲಂಬನೆ ಬದುಕು ಸಾಧ್ಯ. ನಮ್ಮಲ್ಲಿರುವ ಭೂಮಿಯಲ್ಲಿ ಕೃಷಿ ಮಾಡಿದರೆ ದೇಶ ಸೇವೆಯಾಗುತ್ತದೆ. ಈ ನಿಟ್ಟಿನಲ್ಲಿ ಶಾಂತಿನಿಕೇತನ ಸಂಸ್ಥೆಯವರು ಸಾಮಾಜಿಕ ಚಿಂತನೆ ಮಾಡಿಕೊಂಡು ಕೃಷಿ ಉಳಿವಿನ ಬಗ್ಗೆ ಯೋಚಿಸಿ ಹಡಿಲು ಭೂಮಿ ಕೃಷಿ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಉಡುಪಿ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅದಮಾರುಶ್ರೀ ಪ್ರೇರಣೆ
ದೇಶದಲ್ಲಿ ಕೃಷಿಗೆ ಪೂರಕ ವಾತಾವರಣ ಇಲ್ಲ. ಇದರಿಂದ ದೇಶ ಹಿಂದೆಂದೂ ಕಂಡಿರದ ಪ್ರಪಾತಕ್ಕೆ ತಲುಪಬಹುದು. ಸರ್ಕಾರ ವೋಟ್ ಬ್ಯಾಂಕ್ ಗುರಿಯಾಗಿರಿಸಿಕೊಳ್ಳುವ ಕಾರ್ಯಕ್ರಮ ಕೈಬಿಟ್ಟು ಉಚಿತ ಗೊಬ್ಬರ ಕೀಟನಾಶಕ ರೋಗಮುಕ್ತ ಬೀಜ ವಿತರಿಸಬೇಕು. ಉಪಕರಣಗಳ ಬೆಲೆ ಇಳಿಕೆ ಮಾಡಬೇಕು. ಅದಮಾರು ಮಠದ ಶ್ರೀಗಳು ನಮ್ಮ ಸಂಸ್ಥೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದು ಕೆಲಸ–ಕಾರ್ಯಗಳಿಗೆ ನಿರಂತರವಾಗಿ ಹುರಿದುಂಬಿಸುತ್ತಾರೆ. ಲಾಕ್‌ಡೌನ್ ಸಮಯದಲ್ಲಿ ಹಡಿಲು ಭೂಮಿ ಕೃಷಿ ಮಾಡಲು ಪ್ರೇರೇಪಿಸಿದ್ದರು. ಇಂದು ಮತ್ತೊಮ್ಮೆ ಆಶೀರ್ವದಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ನಮ್ಮ ಸಂಘದ ಸದಸ್ಯರು ಎಲ್ಲರ ಸಹಕಾರದಿಂದ ಉತ್ತಮವಾಗಿ ಕೆಲಸ ನಡೆಯುತ್ತಿದೆ ಎಂದು ಶಾಂತಿನಿಕೇತನ ಯುವ ವೃಂದದ ಸಂಸ್ಥಾಪಕ ರಾಜೇಶ್ ನಾಯ್ಕ್ ತಿಳಿಸಿದರು.