‘ಈಗಾಗಲೆ ಸಲ್ಲಿಕೆಯಾದ ಅರ್ಜಿಗಳಿಗೆ ಮಾತ್ರ ಬಿ.ಪಿ.ಎಲ್ ಕಾರ್ಡ್ ಒದಗಿಸಲಾಗುತ್ತಿದೆ. ಹೊಸದಾಗಿ ಕಾರ್ಡ್ ಮಂಜೂರಾತಿಗೆ ಅರ್ಜಿ ಪಡೆಯುತ್ತಿಲ್ಲ’ ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್.
‘ಸರ್ಕಾರಿ ಉದ್ಯೋಗದಲ್ಲಿದ್ದರೂ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದ ಹಲವು ಕುಟುಂಬಗಳಿದ್ದವು. ಅವುಗಳನ್ನು ಹಂತ ಹಂತವಾಗಿ ಪತ್ತೆ ಹಚ್ಚಿ ಕಾರ್ಡ್ ರದ್ದುಪಡಿಸಿ, ದಂಡ ವಿಧಿಸಲಾಗಿದೆ. ಈ ಪ್ರಕ್ರಿಯೆ ನಿರಂತರವಾಗಿ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ಅವರು.
‘ಇಲಾಖೆ ಆದೇಶದ ಅನುಸಾರ ಕಳೆದ ನವೆಂಬರ್ ನಿಂದ ಏಪ್ರಿಲ್ ಅವಧಿಯಲ್ಲಿ ಪಡಿತರ ಪಡೆಯದ ಕಾರ್ಡ್ ಅಮಾನತುಗೊಳಿಸಲಾಗಿದೆ. ನಂತರದ ಅವಧಿಯಲ್ಲಿಯೂ ಪಡಿತರ ಪಡೆಯದ ಕಾರ್ಡ್‍ಗಳ ಬಗ್ಗೆ ಮುಂದಿನ ಆದೇಶದ ಬಳಿಕ ಕ್ರಮವಾಗಬಹುದು’ ಎಂದು ತಿಳಿಸಿದರು.