ಕಾರವಾರ: ತಾಲ್ಲೂಕಿನ ಹಣಕೋಣ ಗ್ರಾಮದ ಉದ್ಯಮಿ ವಿನಾಯಕ ನಾಯ್ಕ ಅವರನ್ನು ಹತ್ಯೆಗೈಯ್ಯಲು ಸುಪಾರಿ ನೀಡಿದ್ದ ಬೋಳಶಿಟ್ಟಾ ಮೂಲದ ಗೋವಾ ಉದ್ಯಮಿ ಗುರುಪ್ರಸಾದ ರಾಣೆ (52) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗುರುಪ್ರಸಾದ ಅವರ ಮೃತದೇಹವು ಗೋವಾ ರಾಜ್ಯದ ಬೇತುಲ್ ಎಂಬಲ್ಲಿ ಮಾಂಡೊವಿ ನದಿ ತೀರದಲ್ಲಿ ಪತ್ತೆಯಾಗಿದೆ ಎಂಬುದಾಗಿ ಅಲ್ಲಿನ ಪೊಲೀಸರು ಖಚಿತಪಡಿಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

‘ವೈಯಕ್ತಿಕ ದ್ವೇಷದಿಂದ ವಿನಾಯಕ ಅವರ ಹತ್ಯೆಗೆ ಗುರುಪ್ರಸಾದ್ ಸುಪಾರಿ ನೀಡಿದ್ದರು. ಇಬ್ಬರೂ ಸಂಬಂಧಿಗಳೂ ಆಗಿದ್ದರು. ಗೋವಾದ ಪೊಂಡಾದಲ್ಲಿರುವ ತಮ್ಮ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಾದ ಅಸ್ಸಾಂ ಮೂಲದ ಲಕ್ಷ್ಮಿಜ್ಯೋತಿನಾಥ, ಬಿಹಾರ ಮೂಲದ ಮಾಸುಮ ಮಹೇಂದ್ರಾಪುರ ಮತ್ತು ಅಜ್ಮಲ್ ಪಯರನಿಯಾ ಎಂಬುವವರನ್ನು ಬಳಸಿಕೊಂಡಿದ್ದರು. ಈ ಮೂವರು ಸೇರಿ ಮಾರಕಾಸ್ತ್ರಗಳಿಂದ ಸೆ.22 ರಂದು ವಿನಾಯಕ ಅವರ ಹತ್ಯೆ ಮಾಡಿದ್ದರು’ ಎಂದೂ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.