ಶಿರೂರು (ಉತ್ತರ ಕನ್ನಡ ಜಿಲ್ಲೆ): ಎರಡು ತಿಂಗಳ ಹಿಂದೆ ಗುಡ್ಡ ಕುಸಿತ ದುರಂತದ ವೇಳೆ ಕಣ್ಮರೆಯಾಗಿದ್ದ ಕೇರಳ ಕೋಯಿಕ್ಕೋಡ್‌ನ ಲಾರಿ ಚಾಲಕ ಅರ್ಜುನ್ ಮೃತದೇಹ ಬುಧವಾರ ಪತ್ತೆಯಾಗಿದೆ.
.ಶಿರೂರು | ಗುಡ್ಡ ಕುಸಿದ ಸ್ಥಳವೀಗ ಸೆಲ್ಫಿ ತಾಣ: ದುರಂತದ ಜಾಗ ವೀಕ್ಷಿಸುವ ಕೇರಳಿಗರು.
ಗಂಗಾವಳಿ ನದಿಯ ಆಳದಲ್ಲಿ ಮಣ್ಣು, ಕಲ್ಲಿನ ಅಡಿ ನುಜ್ಜುಗುಜ್ಜಾದ ಸ್ಥಿತಿಯಲ್ಲಿದ್ದ ಭಾರತ್ ಬೆಂಜ್ ಕಂಪನಿಯ ಲಾರಿಯೊಳಗೆ ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಇದು ಅರ್ಜುನ್ ಅವರದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಖಚಿತಪಡಿಸಿದ್ದಾರೆ.

ಜು.16 ರಂದು ಗುಡ್ಡ ಕುಸಿತದ ವೇಳೆ ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿ ಸಹಿತ ಅರ್ಜುನ್ ಕಣ್ಮರೆಯಾಗಿದ್ದರು. ಅವರ ಪತ್ತೆಗೆ ಕೇರಳ ಸರ್ಕಾರ ವ್ಯಾಪಕ ಒತ್ತಡ ಹೇರಿತ್ತು.
.ಶಿರೂರು ಗುಡ್ಡ ಕುಸಿತ: ಸಂತ್ರಸ್ತರಿಗೆ ಪರಿಹಾರ ನೀಡಲು ಪ್ರಧಾನಿ ಮೋದಿ ಒಪ್ಪಿಗೆ .
ದುರ್ಘಟನೆಯಲ್ಲಿ ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೊಕೇಶ ನಾಯ್ಕ ಅವರನ್ನು ಪತ್ತೆ ಮಾಡಬೇಕಿದೆ. ಘಟನೆಯಲ್ಲಿ ಈವರೆಗೆ 9 ಮಂದಿ ಮೃತಪಟ್ಟಿದ್ದಾರೆ.
.ಶಿರೂರು: ಗಂಗಾವಳಿ ನದಿಯಲ್ಲಿ ಮುಳುಗಿದ್ದ ಗ್ಯಾಸ್ ಟ್ಯಾಂಕರ್ನ ಅವಶೇಷಗಳು ಪತ್ತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.