‘ನಾಗರಿಕ ವಿಮಾನಯಾನ ಸೇವೆಯಾಗಲಿ’
‘ಕಾರವಾರ ಅಲಗೇರಿಯಲ್ಲಿ ನಾಗರಿಕ ವಿಮಾನ ನಿಲ್ದಾಣವಾಗುತ್ತಿದೆ. ಈ ಹಿಂದೆ ಸಿಬರ್ಡ್ ಪ್ರಾಜೆಕ್ಟ್ ಹಾಗೂ ವಿಮಾನ ನಿಲ್ದಾಣ ಪ್ರಾಜೆಕ್ಟ್ ಆಗುವಾಗ ಸಾಕಷ್ಟು ವಿರೋಧ ವ್ಯಕ್ತವಾಗಿದ್ದವು. ಈಗ ನಿರ್ಮಿಸಲಾಗುತ್ತಿರುವ ಅಲಗೇರಿ ನಾಗರಿಕ ವಿಮಾನ ನಿಲ್ದಾಣ 1986ರಲ್ಲಿ ಅಂತಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ರವರು ಬಹಳ ಉತ್ಸುಕರಾಗಿದ್ದರು. ಎರಡನೇ ಹಂತದಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಯೋಜನೆಯನ್ನು ರೂಪಿಸಲಾಗಿತ್ತು. ಈ ವಿಮಾನ ನಿಲ್ದಾಣ ಕೇವಲ ನಾಗರಿಕ ಸೇವೆ ಸಿಬರ್ಡ್ ರವರಿಗೆ ಮಾತ್ರ ಸೀಮಿತವಾಗದೆ ನಾಗರಿಕ ವಿಮಾನಯಾನ ಸೇವೆಯಾಗಬೇಕು. ಇದರಿಂದ ದೊಡ್ಡ ಪ್ರಮಾಣದಲ್ಲಿ ಪ್ರವಾಸೋದ್ಯಮವು ಸಹ ಆಗುತ್ತದೆ. ಮೀನುಗಾರಿಕೆ ತೋಟಗಾರಿಕೆ ಬೆಳೆ ರಫ್ತು ಮಾಡಲು ಸಹಾಯಕವಾಗಬಹುದು. ಈ ಬಗ್ಗೆ ಪಕ್ಷಾತೀತವಾಗಿ ಕಾರ್ಯವನ್ನು ಮಾಡಬೇಕು’ ಎಂದರು.