ಭಟ್ಕಳ: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಕಡಲತೀರದಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಸೀವಾಕ್ (ಪ್ಲೋಟಿಂಗ್ ಬ್ರಿಡ್ಜ್) ಹಾಗೂ ಪ್ಯಾರಸೆಲಿಂಗ್ ಎಂಬ ಎರಡು ಹೊಸ ಜಲಕ್ರೀಡೆ ಆರಂಭಿಸಲಾಗಿದ್ದು, ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

ದೇಶ ವಿದೇಶಗಳಿಂದ ಪ್ರವಾಸಿಗರು ಇಂದಿಗೂ ಇಲ್ಲಿಗೆ ಆಗಮಿಸಿ ನೇತ್ರಾಣಿ ಹವಳದ ದ್ವೀಪದ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಅನುಭವ ಪಡೆದು ಹೋಗುತ್ತಿದ್ದಾರೆ. ಜಿಲ್ಲೆಯ ಗೋಕರ್ಣ ಕಡಲತೀರದಲ್ಲಿ ಇರುವ ಪ್ಯಾರಾಸೆಲಿಂಗ್ ಕ್ರೀಡೆಯನ್ನು ಮುರ್ಡೇಶ್ವರದಲ್ಲಿ ಆರಂಭಿಸಿರುವ ಪ್ರವಾಸೋದ್ಯಮ ಇಲಾಖೆ, ಗಗನಕ್ಕೆ ಹಾರಿ ಮುರುಡೇಶ್ವರದ ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಿ ಹೊಸ ರೋಮಾಂಚನ ಪಡೆಯಲು ಅವಕಾಶ ಮಾಡಿಕೊಟ್ಟಿದೆ.

ಅಲ್ಲದೇ, ಇಲ್ಲಿನ ಕಡಲತೀರದಲ್ಲಿ ಅಳವಡಿಸಿರುವ ತೇಲುವ ಸೇತುವೆ (ಸೀವಾಕ್) ಈಗ ಪ್ರವಾಸಿಗರ ಗಮನ ಸೆಳೆಯುವ ಕೇಂದ್ರ ಬಿಂದುವಾಗಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೊದಲ ಬಾರಿಗೆ ಸೀವಾಕ್ ಅಳವಡಿಸಲಾಗಿತ್ತು. ಅಲ್ಲಿ ಬಿಟ್ಟರೆ ಮುರ್ಡೇಶ್ವರದಲ್ಲಿ ಮಾತ್ರ ರಾಜ್ಯದ ಎರಡನೇ ಸೀವಾಕ್ ಅನುಭವ ಪಡೆಯಲು ಪ್ರವಾಸಿಗರಿಗೆ ಅವಕಾಶವಾಗುತ್ತಿದೆ.

‘ಅಂದಾಜು ₹1 ಕೋಟಿ ಮೊತ್ತದಲ್ಲಿ 100 ಮೀಟರ್ ಉದ್ದವಿರುವ ಸೀವಾಕ್‍ನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ ಸುಮಾರು 100 ಮಂದಿ ಪ್ರವಾಸಿಗರು, 10 ಜೀವರಕ್ಷಕ ಸಿಬ್ಬಂದಿ ಇದರ ಮೇಲೆ ನಡೆದು ಸಮುದ್ರ ವಿಹಂಗಮ ನೋಟವನ್ನು ವೀಕ್ಷಿಸಬಹುದಾಗಿದೆ’ ಎಂದು ಓಶಿಯನ್ ಅಡ್ವೆಂಚರ್ಸ್ ಕಂಪೆನಿಯ ಮಾಲೀಕ ವೆಂಕಟೇಶ್ ತಿಳಿಸಿದರು.

‘ಮುರ್ಡೇಶ್ವರದಲ್ಲಿ ಹೊಸದಾಗಿ ಅಳವಡಿಸಿರುವ ಸೀವಾಕ್ ಉತ್ತಮ ಅನುಭವ ನೀಡುತ್ತಿದೆ. ಕಡಲತೀರದಲ್ಲಿ ಆಡಿ ನಲಿಯಲು ಬಂದಿದ್ದ ನಮಗೆ ಸಮುದ್ರದ ಮೇಲೆ ನಡಿಗೆಯ ಅನುಭವ ಪಡೆಯಲು ಅವಕಾಶವಾಯಿತು’ ಎಂದು ದಾವಣಗೆರೆಯಿಂದ ಬಂದಿದ್ದ ಪ್ರವಾಸಿಗ ಹರೀಶ ಬಳ್ಳಾಪುರ ಖುಷಿ ಹಂಚಿಕೊಂಡರು.

ಮುಖ್ಯಾಂಶಗಳು:

₹1 ಕೋಟಿ ವೆಚ್ಚದಲ್ಲಿ ಸೌಲಭ್ಯ

ಸಮುದ್ರದ ಮೇಲೆ 100 ಮೀಟರ್ ತೇಲುವ ಸೇತುವೆ

ನೂರಕ್ಕೂ ಹೆಚ್ಚು ಜನರು ಏಕಕಾಲಕ್ಕೆ ಸಾಗಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.