ಜೊಯಿಡಾ: ತಾಲ್ಲೂಕಿನ ಗಾವಡೆವಾಡಾದ ಖಾಫ್ರಿ ದೇವರಿಗೆ ಭಕ್ತರು ಹರಕೆ ಹೊತ್ತು ಕಂಬಳಿ ಅರ್ಪಿಸಿ ಅದ್ದೂರಿಯಾಗಿ ಜಾತ್ರೆ ನಡೆಸುತ್ತಾರೆ. ಜಾತ್ರೆಗೆ ಒಂದು ದಿನ ಬಾಕಿ ಇರುವಾಗಲೆ ಕಂಬಳಿಗಳ ಮಾರಾಟ ಜೋರಾಗಿದೆ.

ಕಾರ್ತಿಕ ದ್ವಾದಶಿಯ ಮರುದಿನ ನಡೆಯುವ ಜಾತ್ರೆಗೆ ಭಕ್ತರು ಹರಕೆ ಹೊತ್ತು ಕಂಬಳಿ ನೀಡುವ ಆಚರಣೆಯಿದೆ. ವರ್ಷದಿಂದ ವರ್ಷಕ್ಕೆ ಜಾತ್ರೆ ಪ್ರಸಿದ್ಧಿ ಪಡೆಯುತ್ತಿದೆ. ಕಳೆದ ಬಾರಿ ಜಾತ್ರೆಯ ವೇಳೆ ಸುಮಾರು ಎರಡು ಸಾವಿರಕ್ಕೂ ಅಧಿಕ ಕಂಬಳಿಗಳನ್ನು ಭಕ್ತರು ದೇವರಿಗೆ ಹರಕೆಯಾಗಿ ಅರ್ಪಿಸಿದ್ದರು.

ಈ ಕಾರಣಕ್ಕೆ ಈ ಬಾರಿ ಜಾತ್ರೆಗೆ ಮುಂಚಿತವಾಗಿ ಜೊಯಿಡಾ ಮಾರುಕಟ್ಟೆಗೆ ಚಿತ್ರದುರ್ಗ, ಧಾರವಾಡ, ಬೆಳಗಾವಿ ಮತ್ತು ಹಾವೇರಿಯಿಂದ ಕಂಬಳಿ ವ್ಯಾಪಾರಸ್ಥರು ಕಂಬಳಿ ಮಾರಾಟಕ್ಕೆ ತಂದಿದ್ದಾರೆ. ಕೆಲ ವ್ಯಾಪಾರಸ್ಥರು ದ್ವಿಚಕ್ರ ವಾಹನಗಳಲ್ಲಿ ಪ್ರಮುಖ ಬೀದಿಗಳಲ್ಲಿ ಮತ್ತು ಹಳ್ಳಿಗಳಲ್ಲಿ ಕಂಬಳಿಗಳ ಮಾರಾಟಕ್ಕೆ ಅಲೆಯುತ್ತಿದ್ದಾರೆ.

ತಾಲ್ಲೂಕಿನ ಬುಡಕಟ್ಟು ಕುಣಬಿ ಸಮುದಾಯದ ಸಂಪ್ರದಾಯದಂತೆ ನಡೆಯುವ ಈ ಜಾತ್ರೆ ನವೆಂಬರ್ 14ರ ಗುರುವಾರದಂದು ನಡೆಯಲಿದೆ. ಭಕ್ತರು ಹರಕೆ ಹೊತ್ತು ದೇವರಿಗೆ ಕಂಬಳಿ ಮತ್ತು ಪ್ರಸಾದಕ್ಕೆ ಮಂಡಕ್ಕಿಯನ್ನು ನೀಡುತ್ತಾರೆ.

‘ಖಾಫ್ರಿಯನ್ನು ಗಡಿ ಕಾಯುವ ದೇವರೆಂದು ಕರೆಯಲಾಗುತ್ತದೆ, ಪ್ರತಿ ಹಂತದಲ್ಲೂ ನಮ್ಮ ಹೊಲ ಗದ್ದೆಗಳನ್ನು ಕಾಯುತ್ತಾರೆ ಎಂಬ ನಂಬಿಕೆ ಇದೆ. ಜಾತ್ರೆಯ ದಿನ ಯಾರೂ ಗದ್ದೆಗೆ ಬೆಳೆ ಕಾಯಲು ರಾತ್ರಿ ಹೋಗುವುದಿಲ್ಲ. ಚಪ್ಪರದಲ್ಲಿ ಬೆಂಕಿ ಹಚ್ಚಿ ಬರುತ್ತಾರೆ. ಹಿಂದೆ ಹೊಲಕ್ಕೆ ಹೋದವರನ್ನು ದೇವರು ಓಡಿಸಿದ್ದ ಘಟನೆ ನಡೆದಿದೆ ಎಂದು ಹಿರಿಯರು ಹೇಳುತ್ತಾರೆ’ ಎನ್ನುತ್ತಾರೆ ಸ್ಥಳೀಯರಾದ ಸುರೇಶ ಗಾವಡಾ.

‘ಏಳೆಂಟು ವರ್ಷಗಳಿಂದ ಇಲ್ಲಿ ಕಂಬಳಿ ವ್ಯಾಪಾರಕ್ಕೆ ಬರುತ್ತಿದ್ದೇನೆ. ಜೋಡಿ ಕಂಬಳಿ ₹500 ದರಕ್ಕೆ ಮಾರಾಟ ಮಾಡುತ್ತಿದ್ದೇನೆ. ಈ ಬಾರಿ ಮಾರಾಟಕ್ಕೆ ಹೆಚ್ಚಿನ ಕಂಬಳಿಗಳು ಬಂದಿವೆ. ಉತ್ತಮ ವ್ಯಾಪಾರ ಇದೆ’ ಎನ್ನುತ್ತಾರೆ ಬೆಳಗಾವಿಯ ಕಂಬಳಿ ವ್ಯಾಪಾರಸ್ಥರೊಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.