ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶಿವರಾಮ ಹೆಬ್ಬಾರ ಚುನಾವಣಾಧಿಕಾರಿ ಅಜ್ಜಪ್ಪ ಸೊಗಲದ ಅವರಿಗೆ ಮಂಗಳವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಗ್ರಾಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ನಡೆಸಲಾಯಿತು. ಯಲ್ಲಾಪುರ, ಮುಂಡಗೋಡ ಹಾಗೂ ಬನವಾಸಿ ಭಾಗದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ತೆರೆದ ಜೀಪಿನಲ್ಲಿ ಶಿವರಾಮ ಹೆಬ್ಬಾರ, ಇತರ ಮುಕಂಡರು ಸಾಗಿದರು.

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವರಾಮ ಹೆಬ್ಬಾರ, ‘ಅಭಿವೃದ್ಧಿ ಮತ್ತು ನೀತಿ ಆಧಾರಿತ ಚುನಾವಣೆ ಇದಾಗಿರಲಿದ್ದು, ಬಿಜೆಪಿಯನ್ನು ಜನರು ಬೆಂಬಲಿಸುವ ವಿಶ್ವಾಸವಿದೆ. ಸಿಕ್ಕ ಅಧಿಕಾರವನ್ನು ಕ್ಷೇತ್ರದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಿರುವ ವಿಶ್ವಾಸವಿದೆ’ ಎಂದರು.

ಪ್ರಮುಖರಾದ ವನಜಾಕ್ಷಿ ಹೆಬ್ಬಾರ, ಗೋಪಾಲಕೃಷ್ಣ ಗಾಂವ್ಕರ, ಶಾಂತಾರಾಮ ಸಿದ್ದಿ, ವೆಂಕಟೇಶ ನಾಯಕ, ಎಲ್.ಟಿ.ಪಾಟೀಲ್, ವಿವೇಕ ಹೆಬ್ಬಾರ್, ಬಾಲಚಂದ್ರ ನಾಯಕ, ದೇವು ಪಾಟೀಲ್, ರವಿಗೌಡ ಪಾಟೀಲ್, ಅಶೋಕ ಚಲವಾದಿ ಇದ್ದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಆನಂದ ಗಣಪತಿ ಭಟ್ಟ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.