ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ನಡೆದ ಅವಘಡದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾ ನಾಯ್ಕ (6) ಮತ್ತು ಟ್ಯಾಂಕರ್ ಚಾಲಕನ ಮೃತದೇಹ ಗಂಗಾವಳಿ ನದಿಯಲ್ಲಿ ಗುರುವಾರ ಬೆಳಗಿನ ಜಾವ ಪತ್ತೆಯಾಗಿದೆ.

ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳದಲ್ಲಿ ದೊರೆತಿದೆ. ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ನದಿಗೆ ಬಿದ್ದಿರುವ ಮಣ್ಣಿನ ರಾಶಿ ಬಳಿ ಚಾಲಕನ ಮೃತದೇಹ ಸಿಕ್ಕಿದೆ.

ಎನ್.ಡಿ.ಆರ್.ಎಫ್ ತಂಡದ ಸದಸ್ಯರು ಕಳೆದ ಎರಡು ದಿನಗಳಿಂದಲೂ ಕಣ್ಮರೆಯಾಗಿದ್ದವರಿಗೆ ಶೋಧ ಕಾರ್ಯ ಕೈಗೊಂಡಿದ್ದರು.

ದುರ್ಘಟನೆಯಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿದಂತಾಗಿದ್ದು, ಇನ್ನೂ ಸ್ಥಳೀಯ ಮೂವರು ಸೇರಿದಂತೆ ಇನ್ನಷ್ಟು ಜನ ಕಣ್ಮರೆಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ.

ಸಗಡಗೇರಿ ಸಮೀಪದಲ್ಲಿ ನದಿಯಲ್ಲಿ ಸಿಲುಕಿರುವ ಗ್ಯಾಸ್ ಟ್ಯಾಂಕರ್ ಖಾಲಿ ಮಾಡುವ ಕಾರ್ಯಕ್ಕೆ ಸಿದ್ಧತೆ ನಡೆದಿದೆ.
.ಕಾರವಾರ: ನೆಲೆ ಕಸಿದುಕೊಂಡ ಶಿರೂರು ಗುಡ್ಡ.ಗುಡ್ಡ ಕುಸಿತದ ಅವಘಡ: ಶಿರೂರು, ಉಳುವರೆ ಗ್ರಾಮದಲ್ಲಿ ಜನರ ಆಕ್ರಂದನ.Karnataka Rains | ಉತ್ತರ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತ: 6 ಸಾವು.ಶಿರೂರು ದುರಂತ | IRB, NHAI ಹೊಣೆ: ಸಚಿವ ಮಂಕಾಳ ವೈದ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.