ಶಿರಸಿ: ಎನ್.ಡಬ್ಲ್ಯು.ಕೆ.ಆರ್.ಟಿ.ಸಿ. ಉತ್ತರ ಕನ್ನಡ ವಿಭಾಗದ ವಿವಿಧ ಡಿಪೋಗಳಲ್ಲಿ ಬಸ್ಗಳ ದುರಸ್ತಿಗೆ ಮೆಕ್ಯಾನಿಕ್ಗಳ ಕೊರತೆ ಕಾಡುತ್ತಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಬಸ್ಗಳು ಕೆಟ್ಟುನಿಲ್ಲುವ ಪ್ರಮಾಣ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.

ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗವು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೇ, ದೂರದ ಊರುಗಳಿಗೆ ಹಾಗೂ ಗ್ರಾಮೀಣ ಭಾಗಗಳಿಗೆ ಇಲ್ಲಿನ ಸಾರಿಗೆ ಘಟಕಗಳಿಂದ ಹೆಚ್ಚಿನ ಬಸ್ಸುಗಳು ತೆರಳುತ್ತವೆ. ಹೀಗಾಗಿ ವಿಭಾಗದ ವಿವಿಧ ಘಟಕಗಳ ವ್ಯಾಪ್ತಿಯಲ್ಲಿ 10 ಲಕ್ಷ ಕಿಲೋ ಮೀಟರ್ ಸಂಚರಿಸಿದ ಬಸ್ಗಳ ಸಂಖ್ಯೆ ಹೆಚ್ಚಿದೆ. ಹೀಗೆ ಸಾಮರ್ಥ್ಯ ಮೀರಿದ ಬಸ್ಗಳು ಗ್ರಾಮೀಣ ಭಾಗಕ್ಕೆ ತೆರಳುವ ಕಾರಣಕ್ಕೆ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿವೆ.

ಘಟಕಗಳಿಗೆ ಹೊಸ ಬಸ್ಗಳನ್ನು ನೀಡದ ಪರಿಣಾಮ ಹಳೆ ಬಸ್ಗಳನ್ನೇ ದುರಸ್ತಿ ಮಾಡಿಸಿಕೊಂಡು ಓಡಿಸಬೇಕಾದ ಪರಿಣಾಮ ಮಾರ್ಗಮಧ್ಯೆ ಕೆಟ್ಟು ನಿಲ್ಲುತ್ತಿವೆ. ಇವೆಲ್ಲದಕ್ಕೂ ಅವಧಿ ಮೀರಿದ ಬಸ್ಗಳು ಹಾಗೂ ಅವುಗಳ ದುರಸ್ತಿಗೆ ಬೇಕಿದ್ದ ಮೆಕ್ಯಾನಿಕ್ಗಳ ಕೊರತೆ ಪ್ರಮುಖ ಕಾರಣವಾಗಿದೆ.

ಶಿರಸಿ ಸಾರಿಗೆ ಘಟಕದಲ್ಲಿ 40 ಮೆಕ್ಯಾನಿಕ್ ಹುದ್ದೆ ಸೇರಿ ಉತ್ತರ ಕನ್ನಡ ವಿಭಾಗದ ವಿವಿಧ ಡಿಪೊಗಳಲ್ಲಿ 90ಕ್ಕೂ ಹೆಚ್ಚು ಮೆಕ್ಯಾನಿಕ್ಗಳ ಕೊರತೆಯಿದೆ. ಇದರಿಂದ ಬಸ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ.

‘ಬಹುತೇಕ ಬಸ್ಗಳು 10 ಲಕ್ಷ ಕಿ.ಮೀ ಓಡಿವೆ. ನಿತ್ಯವೂ ಒಂದಿಲ್ಲೊಂದು ದುರಸ್ತಿಗೆ ಬರುತ್ತದೆ. ಕೆಲವು ದಿನ 15-20 ಬಸ್ಗಳು ದುರಸ್ತಿಗೆ ಬರುತ್ತವೆ. ಹೀಗಾಗಿ ದುರಸ್ತಿ ಕಾರ್ಯವೂ ವಿಳಂಬ ಆಗುತ್ತಿದೆ. ಇರುವ ಸಿಬ್ಬಂದಿ ಎಷ್ಟು ಬಸ್ ಸರಿಪಡಿಸಲು ಸಾಧ್ಯ? ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಶಿರಸಿ ಘಟಕದ ಮೆಕ್ಯಾನಿಕ್.

‘ವಿಭಾಗದ ಅಧಿಕಾರಿಗಳು ಸಂಸ್ಥೆಗೆ ಆಗುತ್ತಿರುವ ಹಾನಿಯನ್ನು ಕಡಿಮೆಗೊಳಿಸಿಕೊಳ್ಳಲು ಮತ್ತು ಚಾಲಕ-ನಿರ್ವಾಹಕರ ಕೊರತೆಯಿಂದ ದೂರದ ಮಾರ್ಗಗಳ ಕೆಲ ಸಾರಿಗೆ ಸ್ಥಗಿತಗೊಳಿಸಿ, ಗ್ರಾಮೀಣ ಪ್ರದೇಶಗಳ ಮಾರ್ಗಗಳಿಗೆ ಬಸ್ ಹೊಂದಾಣಿಕೆ ಮಾಡುವ ಕಸರತ್ತು ನಡೆಸಿದ್ದಾರೆ. ಅಲ್ಲದೇ ಹದಗೆಟ್ಟ ಬಸ್ಗಳನ್ನು ದೂರದ ಮಾರ್ಗಗಳಿಗೆ ಕಳುಹಿಸಿದರೆ, ಮಾರ್ಗಮಧ್ಯೆ ಕೈಕೊಡುವ ಆತಂಕದಿಂದಲೂ ಈ ಕ್ರಮ ಅನುರಿಸುತ್ತಿದ್ದಾರೆ' ಎನ್ನುತ್ತಾರೆ ಅವರು.

'ಸಾರಿಗೆ ಸಂಸ್ಥೆಗಳಿಗೆ ಮೆಕ್ಯಾನಿಕ್ಗಳ ನೇಮಕಾತಿ ಮಾಡಿಕೊಳ್ಳದಿರುವುದರಿಂದ ಈ ಸ್ಥಿತಿ ಉಂಟಾಗಿದೆ. ಗುತ್ತಿಗೆ ಆಧಾರದಲ್ಲಿ ಮೆಕ್ಯಾನಿಕ್ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ಹಲವು ತಿಂಗಳಿನಿಂದ ಮೇಲಧಿಕಾರಿಗಳು ಹೇಳುತ್ತಿದ್ದಾರೆಯೇ ಹೊರತು ಖಾಲಿ ಇರುವ ಮೆಕ್ಯಾನಿಕ್ಗಳ ಹುದ್ದೆಗಳನ್ನು ಭರ್ತಿಮಾಡಿಕೊಳ್ಳಲು ಮುಂದಾಗುತ್ತಿಲ್ಲ. ಇದರಿಂದ ನಿತ್ಯ ಬಸ್ಗಳು ರಸ್ತೆಗಳಲ್ಲಿ ಹಾಳಾಗಿ ನಿಲ್ಲುತ್ತಿವೆ' ಎಂಬುದು ಬಸ್ ಚಾಲಕರ ಅಭಿಪ್ರಾಯ.

‘ವಿಭಾಗ ವ್ಯಾಪ್ತಿಯಲ್ಲಿ ಬಹುತೇಕ ಹಳೆಯ ಬಸ್ಗಳನ್ನು ಓಡಿಸಲಾಗುತ್ತಿದ್ದು, ಈ ಬಸ್ಗಳು ಸರಿಯಾದ ಸಮಯಕ್ಕೆ ಆಗಮಿಸುತ್ತಿಲ್ಲ. ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿವೆ. ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ತೊಂದರೆ ಎದುರಿಸುತ್ತಿದ್ದಾರೆ. ಆದಷ್ಟು ಬೇಗ ಸರಿಯಾದ ಸುರಕ್ಷಿತ ಬಸ್ ಸಂಚಾರಕ್ಕೆ ಆದ್ಯತೆ ನೀಡಬೇಕು' ಎಂಬುದು ಪ್ರಯಾಣಿಕರ ಆಗ್ರಹವಾಗಿದೆ.

ಗುಜರಿಗೆ ಹಾಕಬೇಕಾದ ಬಸ್ಗಳನ್ನು ಗ್ರಾಮೀಣ ಭಾಗಕ್ಕೆ ಬಿಡಲಾಗುತ್ತಿದೆ. ಅವುಗಳ ದುರಸ್ತಿಗೆ ಮೆಕ್ಯಾನಿಕ್ಗಳ ಕೊರತೆ ಇದೆ. ಕೂಡಲೇ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು
ದೇವರಾಜ ನಾಯ್ಕ ಶಿರಸಿ ಸಾಮಾಜಿಕ ಕಾರ್ಯಕರ್ತ

55 ಹೊಸ ಬಸ್ಸುಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಹೊಸ ಬಸ್ ಬಂದ ತಕ್ಷಣ ಕಿ.ಮೀ ಅವಧಿ ಮುಕ್ತಾಯಗೊಂಡ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಬಸ್ಗಳನ್ನು ಸ್ಕ್ರ್ಯಾಪ್ ಮಾಡಲಾಗುವುದು
ಶ್ರೀನಿವಾಸ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.