ಗೋಕರ್ಣ: ಧಾರ್ಮಿಕ ಕ್ಷೇತ್ರ ಗೋಕರ್ಣದಲ್ಲಿ ಚಂದ್ರಗ್ರಹಣವನ್ನು ಶನಿವಾರ ಮಧ್ಯರಾತ್ರಿ ಭಕ್ತಿಯಿಂದ ಆಚರಿಸಲಾಯಿತು.

ನಾಡಿನ ಹಾಗೂ ಪಕ್ಕದ ರಾಜ್ಯದಿಂದ ಗ್ರಹಣಾಚರಣೆಗಾಗಿ ಜನಸಾಗರವೇ ಹರಿದು ಬಂದಿತ್ತು. ಇಲ್ಲಿಯ ಮೇನ್ ಬೀಚ್‌ನಲ್ಲಿ ಸಾವಿರಾರು ಜನ ಗ್ರಹಣದ ಸಮಯದಲ್ಲಿ ಸಮುದ್ರ ಸ್ನಾನ ಮಾಡಿ ಪಾವನರಾದರು.

ಸಮುದ್ರರಾಜನ ಪೂಜೆ, ಪಿತೃಗಳಿಗೆ ತಿಲ ತರ್ಪಣ, ಸಮುದ್ರ ದಂಡೆಯಲ್ಲಿ ಕುಳಿತು ಪುರೋಹಿತರಿಗೆ ವಿವಿಧ ವಸ್ತುಗಳನ್ನು ದಾನ ಮಾಡಿ ಕೃತಾರ್ಥರಾದರು. ಸ್ಥಳೀಯರು ಮಹಾಗಣಪತಿ, ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿ ಸಮುದ್ರ ಸ್ನಾನ ಮಾಡಿದರು. ಅನೇಕ ಜನ ಮಹಾಬಲೇಶ್ವರ ದೇವಸ್ಥಾನದಲ್ಲಿ, ಸಮುದ್ರ ದಂಡೆಯ ಮೇಲೆ ಕುಳಿತು ಗ್ರಹಣ ಬಿಡುವ ತನಕ ಜಪ, ಧ್ಯಾನ ಮಾಡಿ ಭಕ್ತಿ ಪರವಶರಾದರು.

ಪಕ್ಕದ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಹಳಷ್ಟು ಭಕ್ತರು ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.