ಮುಂಡಗೋಡ: ಕಳೆದ ವರ್ಷ ಕಡಿಮೆ ಮಳೆಯಿಂದ ಕೈ ಸುಟ್ಟುಕೊಂಡಿದ್ದ ಗೋವಿನ ಜೋಳ ಬೆಳೆಗಾರರು, ಈ ವರ್ಷ ಅತಿಯಾದ ಮಳೆಯಿಂದ ಆರಂಭದಲ್ಲಿಯೇ ಬೆಳೆ ಕೊಳೆಯುವ ಹಂತಕ್ಕೆ ತಲುಪಿದ್ದರಿಂದ ಆತಂಕಗೊಂಡಿದ್ದಾರೆ.

ತಾಲ್ಲೂಕಿನ ಸಾಂಪ್ರದಾಯಿಕ ಬೆಳೆ ಭತ್ತದಿಂದ ವಿಮುಖರಾಗಿ ಗೋವಿನಜೋಳದತ್ತ ಮುಖ ಮಾಡಿರುವ ರೈತರ ಬವಣೆ ಈ ವರ್ಷವೂ ಮುಂದುವರೆದಿದೆ. ‘ಕಳೆದ ವರ್ಷ ಬರಗಾಲದಿಂದ ತತ್ತರಿಸಿದ್ದೆವು. ಈ ವರ್ಷ ಸತತ ಮಳೆಯಿಂದ ಬೆಳೆ ಹಾನಿ ಅನುಭವಿಸುವಂತಾಗಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಸುಮಾರು 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಗೋವಿನಜೋಳ ಬೆಳೆಯುವ ರೈತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ.

ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿದ ಮಳೆಯು, ಗೋವಿನಜೋಳ ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡಿದೆ. ಬಯಲು ಪ್ರದೇಶ, ಇಳಿಜಾರು ಭೂಮಿಯಲ್ಲಿ ಬೆಳೆದ ಬೆಳೆ ತಕ್ಕಮಟ್ಟಿಗೆ ಉತ್ತಮವಾಗಿದೆ. ಆದರೆ, ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಗೋವಿನಜೋಳ ಅತಿಯಾದ ನೀರಿನಿಂದ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ.

‘ಕಳೆದ ವರ್ಷ ಗೋವಿನಜೋಳಕ್ಕೆ ನೀರಿನ ಕೊರತೆ ಆಗಿದೆ ಎಂದು ಸ್ಪ್ರಿಂಕ್ಲರ್ ಜೆಟ್ ಮೂಲಕ ನೀರುಣಿಸಲಾಗಿತ್ತು. ಈ ವರ್ಷ ನಿರಂತರ ಮಳೆಯಿಂದ ನೀರು ಹೆಚ್ಚಾಗಿ ಬೆಳೆ ಹಾನಿಯಾಗುವ ಭೀತಿ ಎದುರಾಗಿದೆ. ಮೇ ತಿಂಗಳ ಅಂತ್ಯದಲ್ಲಿ ಗೋವಿನಜೋಳ ಬಿತ್ತಿರುವ ಬೆಳೆಯು ಎದೆಎತ್ತರಕ್ಕೆ ಬೆಳೆದು ಉತ್ತಮವಾಗಿದೆ. ಆದರೆ, ಸ್ವಲ್ಪ ತಡವಾಗಿ ಬಿತ್ತಿರುವ ಗೋವಿನಜೋಳ ಮಳೆಗೆ ನೆಲ ಹಿಡಿದುಕೊಂಡು, ಜೌಗು ಹಿಡಿಯುವ ಹಂತಕ್ಕೆ ಬಂದಿದೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ಶಿವಕುಮಾರ ಪಾಟೀಲ.

‘ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಗೋವಿನಜೋಳಕ್ಕೆ ಅತಿಯಾದ ಮಳೆಯಿಂದ ಹಾನಿಯಾಗಿದೆ. ಬೆಳೆ ನಿರೀಕ್ಷೆಯಂತೆ ಬೆಳೆದಿಲ್ಲ. ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿವೆ. ಕೆಲವೊಂದು ಎತ್ತರಕ್ಕೆ ಬೆಳೆದಿರುವ ಬೆಳೆ ಗಾಳಿಗೆ ಬಿದ್ದಿದೆ. ಮಳೆ ಬಿಡುವು ನೀಡದಿದ್ದರೆ, ಗೋವಿನಜೋಳ ಈ ಸಲ ರೈತರ ಕೈ ಹಿಡಿಯುವುದು ಕನಸಿನ ಮಾತಾಗಬಹುದು’ ಎಂದು ಕೊಳಗಿಯ ಶ್ರೀಕಾಂತ ಗೊಟಗೋಡಿ ಹೇಳಿದರು.

ಬಸಿಗಾಲುವೆ ಮೂಲಕ ನೀರು

ಹೊರಹಾಕಿ ‘ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಗೋವೀನಜೋಳಕ್ಕೆ ಅತಿಯಾದ ಮಳೆಯಿಂದ ಕೊಳೆರೋಗ ಬರುವ ಸಾಧ್ಯತೆಯಿದೆ. ಬಸಿಗಾಲುವೆಗಳ ಮೂಲಕ ನೀರನ್ನು ಹೊರತೆಗೆಯಬೇಕು. ಕೊಳೆರೋಗ ನಿಯಂತ್ರಣಕ್ಕೆ ಟಿಲ್ಪ್ (ಪ್ರೊಪಿಕೊನೆಜೋಲ್) ಸಸ್ಯ ಸಂರಕ್ಷಣಾ ಔಷಧಿಯನ್ನು ಒಂದು ಮಿಲಿ ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಕಾಂಡದ ಕೆಳಗಿನ ಭಾಗಕ್ಕೆ ಸಿಂಪಡಣೆ ಮಾಡಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಸಲಹೆ ನೀಡಿದ್ದಾರೆ. ‘ಈವರೆಗೆ ವಾಡಿಕೆಗಿಂತ ತುಸು ಹೆಚ್ಚು ಮಳೆಯಾಗಿದೆ. ಇಳಿಜಾರು ಪ್ರದೇಶ ಹಕ್ಕಲು ಪ್ರದೇಶಗಳಲ್ಲಿನ ಗೋವಿನಜೋಳ ಉತ್ತಮವಾಗಿದೆ. ಆದರೆ ಭತ್ತದ ಗದ್ದೆಗಳಲ್ಲಿ ಬೆಳೆದಿರುವ ಗೋವಿನಜೋಳಕ್ಕೆ ತೇವಾಂಶ ಹೆಚ್ಚಾಗಿ ತಕ್ಕ ಮಟ್ಟಿಗೆ ಹಾನಿಯಾಗುವ ಸಾಧ್ಯತೆಯಿದೆ. ಕನಿಷ್ಠ ಒಂದು ವಾರದವರೆಗೆ ಬಿಸಿಲು ಬೀಳಬೇಕಾದ ಅವಶ್ಯಕತೆಯಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.