ಅಂಕೋಲಾ: ಇಲ್ಲಿ ರಸ್ತೆ ಹೊಂಡಗಳೇ ಪ್ರಯಾಣಿಕರಿಗೆ ಎದುರಾಗುತ್ತವೆ. ವಾಹನ ಚಾಲಕರು ಒಂದನ್ನು ತಪ್ಪಿಸಲು ಹೋದರೆ ಮತ್ತೊಂದಕ್ಕೆ ಚಕ್ರ ಇಳಿಯುತ್ತದೆ. ವಾಹನದಲ್ಲಿ ಕುಳಿತ ಪ್ರಯಾಣಿಕರು ‘ಈ ರೀತಿಯ ರಸ್ತೆ ಇನ್ನೆಷ್ಟು ದೂರ’ ಎಂದು ಆತಂಕಕ್ಕೆ ಒಳಗಾಗುತ್ತಾರೆ!

ಪಟ್ಟಣದ ದಿನಕರ ದೇಸಾಯಿ ರಸ್ತೆ, ಕೆ.ಸಿ ರಸ್ತೆಗಳಿಗೆ ಪ್ರತಿವರ್ಷ ತೇಪೆ ಹಾಕುವ ಕಾರ್ಯ ಕೈಗೊಳ್ಳಲಾಗುತ್ತದೆ. ಆದರೆ, ಮಳೆಗಾಲದಲ್ಲಿ ಡಾಂಬರ್, ಜಲ್ಲಿ ಕಿತ್ತು ಹೋಗಿ ರಸ್ತೆಯಲ್ಲಿ ತಗ್ಗು– ದಿಣ್ಣೆಗಳು ಕಾಣಿಸಿಕೊಳ್ಳುತ್ತವೆ. ಅನೇಕ ಸಂದರ್ಭಗಳಲ್ಲಿ ಬೈಕ್ ಚಕ್ರ ಹೊಂಡದಲ್ಲಿ ಜಾರಿ ಬಿದ್ದು ಸವಾರರು ಗಂಭೀರವಾದ ಗಾಯಗೊಂಡ ಉದಾಹರಣೆಗಳಿವೆ. ಅಲ್ಲದೆ, ವಾಹನಗಳು ಹಾಳಾಗಿ, ದುರಸ್ತಿಗೂ ಹಣ ಖರ್ಚಾಗುತ್ತಿದೆ.

‘ಪುರಸಭೆಗೆ ಅನೇಕ ಬಾರಿ ತಿಳಿಸಿದ್ದೇವೆ. ಆದರೂದುರಸ್ತಿ ಮಾಡುತ್ತಿಲ್ಲ. ವಯಸ್ಸಾದವರು ಬಿದ್ದು ಮೂಳೆಗಳು ಮುರಿದಿವೆ. ದೂಳಿನಿಂದ ಬರುವ ರೋಗಗಳಿಂದ ತೊಂದರೆಗಳಾಗುತ್ತಿವೆ. ಹೊಂಡಗಳು ರಾತ್ರಿ ಸರಿಯಾಗಿ ಕಾಣುವುದಿಲ್ಲ. ಇದರಿಂದ ಅಪಘಾತಗಳಾಗಿ ಜೀವಹೋಗುವಮೊದಲು ನಾಗರಿಕರನ್ನು ರಕ್ಷಿಸಿ’ ಎಂದು ಅಜ್ಜಿಕಟ್ಟಾ ನಿವಾಸಿ, ಅಕ್ಷಯ ಗ್ಯಾರೇಜ್ನ ಎಂಜಿನಿಯರ್ ನಾಗೇಂದ್ರ ಮಹಾಲೆಅಳಲು ತೋಡಿಕೊಳ್ಳುತ್ತಾರೆ.

ಈ ಬಾರಿಯ ಭಾರಿ ಮಳೆ ಮತ್ತು ನೆರೆಯಿಂದ ಗ್ರಾಮೀಣ ಭಾಗದ ರಸ್ತೆ ಗಳೂ ಸಾಕಷ್ಟು ಹಾನಿಗೆ ಒಳಗಾಗಿವೆ. ಹಾಗಾಗಿ, ಅವುಗಳ ದುರಸ್ತಿಗೆ ಆದ್ಯತೆ ನೀಡಬೇಕು ಎಂಬಬೇಡಿಕೆಯೂ ಇದೆ.

‘ತಾಲ್ಲೂಕಿನ ಕೇಣಿ ರಸ್ತೆಯ ತಿರುವಿನಲ್ಲಿ, ತಿಂಗಳಬೈಲ್, ಹಿಲ್ಲೂರ ಭಾಗದಲ್ಲಿ...ಹೀಗೆ ಅನೇಕ ಕಡೆಗಳಲ್ಲಿ ಶಾಲಾ ಮಕ್ಕಳಿಗೆ, ಸಾರಿಗೆ ಬಸ್ಗಳಿಗೆ ಸಂಚರಿಸಲು ಆಗುತ್ತಿಲ್ಲ. ಜನಪ್ರತಿನಿಧಿಗಳೂ ಈ ಬಗ್ಗೆಗಮನ ಹರಿಸುತ್ತಿಲ್ಲ’ ಎಂಬುದು ಸಾರ್ವಜನಿಕರ ಆರೋಪವಾಗಿದೆ.

‘ಕಾಮಗಾರಿಗೆ ಪ್ರಸ್ತಾವ ಸಲ್ಲಿಕೆ’:‘ಪಟ್ಟಣದ ರಸ್ತೆಗಳನ್ನು ಈಗಾಗಲೇ ಅಲ್ಲಲ್ಲಿ ದುರಸ್ತಿ ಮಾಡಿದ್ದೇವೆ. ಆದರೆ, ಜೋರಾಗಿ ಸುರಿದ ಮಳೆಯಿಂದ ಮತ್ತೆ ಹಾಳಾಗುತ್ತಿದೆ.ನಾವು ಈಗಾಗಲೇ ಮೇಲಧಿಕಾರಿಗಳಿಗೆ ಅಂದಾಜು ₹ 16.75 ಲಕ್ಷದ ಕಾಮಗಾರಿಗೆಪ್ರಸ್ತಾವ ಕಳುಹಿಸಿದ್ದೇವೆ. ಅನುದಾನ ಬಂದ ಕೂಡಲೇ ರಸ್ತೆಯ ದುರಸ್ತಿ ಮಾಡುತ್ತೇವೆ’ ಎಂದು ಪುರಸಭೆ ಮುಖ್ಯಾಧಿಕಾರಿಬಿ.ಪ್ರಹ್ಲಾದ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.