ಕಾರವಾರ: ಕುಮಟಾ ತಾಲ್ಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಗದ್ದೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ಇಬ್ಬರು ಮೃತ ಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ.

ಪೋಸ್ಟ್ ಬೆಟ್ಕುಳಿ ಗ್ರಾಮದವರಾದ ಸತೀಶ ನಾಯ್ಕ (39), ಉಲ್ಲಾಸ ಗಾವಡಿ (60) ಮೃತರು. ಸತೀಶ ಅವರಿಗೆ ಸೇರಿದ್ದ ಗದ್ದೆಗೆ ಬೇಲಿ ಹಾಕಲು ತೆರಳಿದ್ದಾಗ ಘಟನೆ ಸಂಭವಿಸಿದೆ.

'ಅಘನಾಶಿನಿ ನದಿ ಮಟ್ಟ ಏರಿಕೆಯಾಗಿ ಗದ್ದೆಯಲ್ಲಿ ಪೂರ್ತಿ ನೀರು ತುಂಬಿಕೊಂಡಿತ್ತು. ಬೇಲಿ ಹಾಕುವ ವೇಳೆ ಉಲ್ಲಾಸ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿದ್ದರು. ಅವರ ರಕ್ಷಣೆಗೆ ಧಾವಿಸಿದ್ದ ಸತೀಶ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ' ಎಂದು ಗೋಕರ್ಣ ಠಾಣೆ ಪೊಲೀಸರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಮಳೆಯಿಂದಾಗಿ ಜೀವಹಾನಿಯಾದ ಎರಡನೆ ಪ್ರಕರಣ ಇದಾಗಿದೆ. ಜುಲೈ 5 ರಂದು ಕಾರವಾರ ತಾಲ್ಲೂಕಿನ ಅರ್ಗಾ ಗ್ರಾಮದಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.