ಶಿರಸಿ: ಕಾರ್ಯಕರ್ತರು ಹಾಗೂ ಬೆಂಬಲಿಗರ ಒತ್ತಾಯದ ಮೇರೆಗೆ ನ.30ಕ್ಕೆ ಶಿರಸಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ ಆಗುವುದಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಹಳಿಯಾಳದ ಎಸ್.ಎಲ್. ಘೋಟ್ನೇಕರ್ ಹೇಳಿದರು.

ನಗರದಲ್ಲಿ ಶುಕ್ರವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತಮ್ಮ ಬೆಂಬಲಿಗರ ಜತೆ ಭೇಟಿಯಾದ ವೇಳೆ ಅವರು ಸುದ್ದಿಗಾರರ ಜತೆ ಮಾತನಾಡಿದರು. ಜೆಡಿಎಸ್ ಪಕ್ಷದ ಮೇಲೆ ಬೇಜಾರಿಲ್ಲ. ಆದರೆ ಹಳಿಯಾಳ ಕ್ಷೇತ್ರದ ನನ್ನ ಬೆಂಬಲಿಗರು ಬಹುತೇಕ ಬಿಜೆಪಿ ಕಡೆ ಒಲವು ಹೊಂದಿದ್ದಾರೆ. ಈಗಾಗಲೇ ಹಲವರು ಬಿಜೆಪಿ ಸೇರಿದ್ದಾರೆ. ಹಳಿಯಾಳ ಭಾಗದ ಮೂಲ ಬಿಜೆಪಿಗರು ಕೂಡ ನನ್ನ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದೆ. ಈ ಹಿಂದೆ ಕಾಂಗ್ರೆಸ್ ತೊರೆದಾಗಲೇ ಬಿಜೆಪಿ ಸೇರಬೇಕಿತ್ತು. ಆದರೆ ಕೆಲ ಕಾರಣಕ್ಕೆ ಜೆಡಿಎಸ್ ಸೇರುವಂತಾಗಿತ್ತು. ಈಗ ಬಿಜೆಪಿ ಸೇರಿ ಮುಂಬರುವ ಎಲ್ಲ ಚುನಾವಣೆಯಲ್ಲಿ ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಲು ಪ್ರಯತ್ನ ಮಾಡಲಾಗುವುದು' ಎಂದರು.

'ಜನರಿಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ನುಡಿದಂತೆ ನಡೆಯುತ್ತಿಲ್ಲ. ಗ್ಯಾರೆಂಟಿ ಯೋಜನೆಗೆ ಉಳಿದ ಅಭಿವೃದ್ಧಿ ಹಣ ಬಳಸಲಾಗುತ್ತಿದೆ. ಸರ್ಕಾರದ ಬಳಿ ಹಣವಿಲ್ಲ' ಎಂದು ಹೇಳಿದರು.

ಈ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈಗಾಗಲೆ ಸೇರ್ಪಡೆ ವಿಚಾರ ಚರ್ಚಿಸಲಾಗಿದೆ. ನನ್ನ ಗೆಲುವಿನಲ್ಲಿ ಸುನೀಲ ಹೆಗಡೆ ಜತೆ ಘೋಟ್ನೇಕರ್ ಸಹಕಾರ ಸಾಕಷ್ಟಿದೆ. ಮರಾಠಾ ಸಮುದಾಯದ ನಾಯಕರಾಗಿರುವ ಅವರು ಬಿಜೆಪಿ ಸೇರ್ಪಡೆ ಆಗುತ್ತಿರುವುದು ಮತ್ತಷ್ಟು ಬಲ ತರಲಿದೆ' ಎಂದರು.

'ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಕೊಳೆತ ಸ್ಥಿತಿ ತಲುಪಿದೆ. ಯಾರೊಬ್ಬರಿಂದಲೂ ಅದನ್ನು ಸಹಿಸಲು ಆಗುತ್ತಿಲ್ಲ. ಸರ್ಕಾರದ ಜನವಿರೋಧಿ ನಡೆ ಬಗ್ಗೆ ಬಿಜೆಪಿಯದ್ದು ನಿರಂತರ ಹೋರಾಟವಾಗಿದೆ' ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.