ಭಟ್ಕಳ: 'ಖಾತೆ ಬದಲಾವಣೆಯಿಂದ ಬೇಸರಗೊಂಡು ಸಚಿವ ಆನಂದ ಸಿಂಗ್ ರಾಜೀನಾಮೆ ನೀಡಲು ಮುಂದಾಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಒಂದುವೇಳೆ, ಅವರು ಮುಂದಾಗಿದ್ದರೆ ನಾನು ಮತ್ತು ಬಸವರಾಜ ಬೊಮ್ಮಾಯಿ ಜೊತೆಯಾಗಿ ರಾಜೀನಾಮೆ ನೀಡದಂತೆ ಮನವೊಲಿಕೆ ಮಾಡುತ್ತೇವೆ' ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಮಿನಿ ವಿಧಾನಸೌಧ ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

'ಖಾತೆಗಳ ಬದಲಾವಣೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿ ತೀರ್ಮನವೇ ಅಂತಿಮವಾಗಿದೆ' ಎಂದರು.

'ತಾಲ್ಲೂಕು ಪಂಚಾಯಿತಿಗೆ ಅನುದಾನದ ಕೊರತೆಯಿದೆ. ಮುಂದಿನ ಚುನಾವಣೆಯ ವೇಳೆಗೆ ತಾಲ್ಲೂಕು ಪಂಚಾಯಿತಿ ರದ್ದು ಮಾಡಲು ಸರ್ಕಾರ ಚಿಂತನೆ ನಡೆಸಿದೆ' ಎಂದು ಹೇಳಿದರು.

ರೈತರ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ಕೈವಾಡವಿದೆ. ಟ್ರ್ಯಾಕ್ಟರ್ ಮೆರವಣಿಗೆಯು ಕಾಂಗ್ರೆಸ್ ನಿಂದ ಪ್ರೇರಿತವಾಗಿದೆ' ಎಂದು ದೂರಿದರು.

'ರಾಜ್ಯದಲ್ಲಿರುವ ಕಲ್ಲು ಕ್ವಾರಿಗಳ ಬಗ್ಗೆ ವಿಶೇಷ ತನಿಖೆಗೆ ಆಗ್ರಹಿಸಲಾಗುವುದು. ಈ ಹಿಂದೆ ಕೂಡ ಇದೇರೀತಿ ಅನೇಕರು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.