ಹೊಸಪೇಟೆ (ವಿಜಯನಗರ): ‘ಜಗತ್ತಿನಲ್ಲಿ ಸಂಸ್ಕೃತಿ ವಿಭಿನ್ನ ಇದ್ದರೂ, ಅದು ನಮ್ಮನ್ನು ಒಗ್ಗೂಡಿಸುತ್ತಿದೆ ಎಂಬುದಕ್ಕೆ ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆ ಮತ್ತು ಅದರಿಂದ ಮುಡುವ ಫಲಶ್ರುತಿಗಳೇ ಸಾಕ್ಷಿ. ಭಾರತದ ಪುರಾತನ ಕಲೆ, ಸಂಸ್ಕತಿಯ ಗಾಢ ಪ್ರಭಾವದ ನಡುವೆ ನಡೆಯುತ್ತಿರುವ ಈ ವರ್ಷದ ಸಭೆಗಳಿಗೆ ಇನ್ನಷ್ಟು ಮಹತ್ವ ಇದೆ’ ಎಂದು ಕೇಂದ್ರದ ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಲ್ಹಾದ ಜೋಷಿ ಹೇಳಿದರು.

ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಸೋಮವಾರ ಆರಂಭವಾದ ಜಿ20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ (ಸಿಡಬ್ಲ್ಯುಜಿ) 3ನೇ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸಂಸ್ಕೃತಿ ಎಂಬುದು ಭೂತಕಾಲ ಮತ್ತು ಭವಿಷ್ಯಕಾಲಕ್ಕೆ ಇರುವ ಸೇತುವೆ. ಜಗತ್ತಿನೆಲ್ಲೆಡೆ ಇರುವ ವೈವಿಧ್ಯಮಯ ಸಂಸ್ಕೃತಿಯೇ ನಮ್ಮೆಲ್ಲರನ್ನು ಇಂದು ಒಂದುಗೂಡಿಸಿದೆ. ನಮ್ಮ ಭಾಷೆ, ಪರಂಪರೆಗಳನ್ನು ಇನ್ನೊಂದು ದೇಶ ಗೌರವಿಸುವ, ನಮ್ಮ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಇಂತಹ ಸಭೆಗಳಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಮತ್ತು ಬದ್ಧತೆಗಳು ಬಹಳ ಪರಿಣಾಮಕಾರಿ. ಜಿ20 ಗುಂಪಿನ ಅಧ್ಯಕ್ಷತೆ ವಹಿಸಿರುವ ಭಾರತಕ್ಕೆ ಇದೊಂದು ಉತ್ತಮ ಅವಕಾಶವಾಗಿ ದೊರೆತಿದ್ದು, ಜಗತ್ತಿನ ಮೇಲೆ ಪ್ರಭಾವ ಬೀರುವುದು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.

ಜಿ20 ಗುಂಪಿನ ಎಲ್ಲಾ 20 ರಾಷ್ಟ್ರಗಳ ಪ್ರತಿನಿಧಿಗಳಲ್ಲದೆ, 9 ಆಹ್ವಾನಿತ ದೇಶಗಳ ಪ್ರತಿನಿಧಿಗಳು ಹಾಗೂ ಏಳು ಅಂತರರಾಷ್ಟ್ರೀಯ ಸಂಘಟನೆಗಳ ಪ್ರತಿನಿಧಿಗಳು 3ನೇ ಸಿಡಬ್ಲ್ಯುಜಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಖಜುರಾಹೊ ಮತ್ತು ಭುವನೇಶ್ವರಗಳಲ್ಲಿ ಮೊದಲ ಎರಡು ಸಿಡಬ್ಲ್ಯುಜಿ ಸಭೆಗಳು ನಡೆದಿದ್ದವು. ಆಗಸ್ಟ್ 26ರಿಂದ ವಾರಾಣಸಿಯಲ್ಲಿ ನಾಲ್ಕನೇ ಸಿಡಬ್ಲ್ಯುಜಿ ಸಭೆ ನಡೆಯಲಿದೆ.

ಬಾಂಬೂ ಸಿಂಫೋನಿ ಸಂಗೀತ

ಭಾನುವಾರ ಸಂಜೆ ಹಂಪಿಯ ಆರಂಜ್ ಕೌಂಟಿಗೆ ಬಂದ ವಿದೇಶಿ ಗಣ್ಯರನ್ನು ಖ್ಯಾತ ಬಾಂಬೂ ಸಿಂಫೋನಿ ಸಂಗೀತ ತಂಡ ತನ್ನ ಸಂಗೀತ ರಸಸಂಜೆಯ ಮೂಲಕ ರಂಜಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.