ಹಗರಿಬೊಮ್ಮನಹಳ್ಳಿ (ವಿಜಯನಗರ): ತಾಲ್ಲೂಕಿನ ಹಂಪಸಾಗರ ಗ್ರಾಮದ ರೈತ ತಟ್ಟಿ ಜಗದೀಶ್ ಅವರ ಜಮೀನಿನಲ್ಲಿ ಮೋಟಾರ್, ಸ್ಟಾರ್ಟರ್ ಮತ್ತು ವೈರ್ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ ನಾಲ್ಕು ಜನ ಕಳ್ಳರನ್ನು ಭಾನುವಾರ ತಾಲ್ಲೂಕಿನ ತಂಬ್ರಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹೂವಿನ ಹಡಗಲಿಯ ಹನುಮಂತಪ್ಪ ಕೊರವರ, ಹಂಪಸಾಗರ-3 ಗ್ರಾಮದ ಸುರೇಶ ಕೊರವರ, ಭಜಂತ್ರಿಜಗದೀಶ, ಕೊಂಬಳಿಯ ಮಾರುತಿ ಬಂಧಿತರು. ಈ ಎಲ್ಲ ಆರೋಪಿತರು ತಂಬ್ರಹಳ್ಳಿಯ ಠಾಣೆಯಲ್ಲಿ ಎರಡು,ಹೊಸಹಳ್ಳಿಯಲ್ಲಿ ಒಂದು, ಗುಡೇಕೋಟೆಯಲ್ಲಿ ಎರಡು, ಹರಪನಹಳ್ಳಿಯಲ್ಲಿ ಒಂದು ಸೇರಿದಂತೆ ಒಟ್ಟು 6 ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

ಇವರೆಲ್ಲರೂ ಬ್ಯಾಟರಿಗಳನ್ನು ಕಳ್ಳತನ ಮಾಡಿ ಅವುಗಳನ್ನು ತುಂಡರಿಸಿ ಅದರಲ್ಲಿದ್ದ ಕಾಪರ್ ಮಾರಾಟ ಮಾಡುತ್ತಿದ್ದರು.

ಸಿಪಿಐ ಟಿ.ಮಂಜಣ್ಣ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಬಂಧಿತರಿಂದ ₹3.5ಲಕ್ಷ ನಗದು, 210 ಮೀಟರ್ ಉದ್ದದ ಕಾಪರ್ ವೈರ್ ಮತ್ತು ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.