ಹೊಸಪೇಟೆ (ವಿಜಯನಗರ): ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿಯ ಹಂಪಿ ಉತ್ಸವವನ್ನು ಸಂಪೂರ್ಣ ರದ್ದುಪಡಿಸಿರುವ ಕುರಿತು ಶಾಸಕ ಎಚ್.ಆರ್.ಗವಿಯಪ್ಪ ಸುಳಿವು ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಪ್ರಯುಕ್ತ ಭಾನುವಾರ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ, ಭಾಷಣ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬರಗಾಲದಿಂದ ಕುಡಿಯಲು ಸಹ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಹೀಗಾಗಿ ನವೆಂಬರ್ನಿಂದ ಫೆಬ್ರುವರಿಗೆ ಮುಂದೂಡಲಾಗಿದ್ದ ಹಂಪಿ ಉತ್ಸವ ಈ ವರ್ಷ ನಡೆಯದೆ ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಬಗ್ಗೆ ನನಗೆ ಮಾಹಿತಿ ಲಭಿಸಿದೆ’ ಎಂದರು.

‘ಮೈಸೂರು ದಸರಕ್ಕೂ, ಹಂಪಿ ಉತ್ಸವಕ್ಕೂ ಹೋಲಿಕೆ ಮಾಡುವಂತಿಲ್ಲ. ಮೈಸೂರು ದಸರಾ ನವರಾತ್ರಿ ವೇಳೆ ಆಚರಿಸಲಾಗುವ ಉತ್ಸವ. ಅದನ್ನು ಅದೇ ಕಾಲಕ್ಕೆ ಆಚರಿಸಬೇಕಾಗುತ್ತದೆ. ಹಂಪಿ ಉತ್ಸವವನ್ನು ಸಹ ಮುಂದಿನ ದಿನಗಳಲ್ಲಿ ದಸರಾ ದಿನಗಳಲ್ಲಿ ಅಥವಾ ನಿರ್ದಿಷ್ಟ ದಿನಗಳಲ್ಲಿ ಆಚರಿಸುವ ಬಗ್ಗೆ ಯೋಚಿಸಲಾಗುವುದು’ ಎಂದು ಶಾಸಕ ಗವಿಯಪ್ಪ ಹೇಳಿದರು.

ಇದಕ್ಕೆ ಮೊದಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಅನುಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಧ್ವಜಾರೋಹಣ ನೆರವೇರಿಸಿ, ಜಿಲ್ಲೆಯನ್ನುದ್ದೇಶಿಸಿ ಮಾತನಾಡಿದರು. ಕ್ರೀಡಾಂಗಣದ ಮಧ್ಯಭಾಗದಲ್ಲಿರುವ ದೇಶದ ಅತ್ಯಂತ ಎತ್ತರದ ಧ್ವಜಸ್ತಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.